Breaking News

ಟಿಕ್‌ಟಾಕ್ ನಿಷೇಧಿಸಿದ ಬ್ರಿಟನ್

ಲಂಡನ್, ಮಾ.16: ಸರಕಾರಿ ಸಾಧನಗಳಲ್ಲಿ ಟಿಕ್‌ಟಾಕ್ ಆಯಪ್ ಬಳಸುವುದನ್ನು ತಕ್ಷಣದಿಂದ ಜಾರಿಯಾಗುವಂತೆ ನಿಷೇಧಿಸಲಾಗಿದೆ ಎಂದು ಬ್ರಿಟನ್ನ ಸಚಿವ ಒಲಿವರ್ ಡೌಡನ್ ಗುರುವಾರ ಹೇಳಿದ್ದಾರೆ.

ಸರಕಾರದ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಗಳನ್ನು ಒಳಗೊಂಡಿರುವ ಸಾಧನಗಳನ್ನು ಟಿಕ್ಟಾಕ್ ಬಳಸುವುದರಿಂದ ಆಗಬಹುದಾದ ಅಪಾಯದ ಸಾಧ್ಯತೆಯನ್ನು ಮನಗಂಡು ಮುನ್ನೆಚ್ಚರಿಕೆಯ ಕ್ರಮವಾಗಿ ಈ ನಿಷೇಧ ಜಾರಿಗೊಳಿಸಲಾಗಿದೆ.

ಸರಕಾರದಿಂದ ಅನುಮೋದನೆ ಪಡೆದ ಆಯಪ್ಗಳನ್ನು ಮಾತ್ರ ಬಳಸಬಹುದಾದ ವ್ಯವಸ್ಥೆಯನ್ನು ಜಾರಿಗೊಳಿಸಲಿದ್ದೇವೆ ಎಂದವರು ಹೇಳಿದ್ದಾರೆ.

About gaitonlennon_rodrigues

Check Also

ಬೆಳ್ಳಿ ಅಸಲಿಯೋ ನಕಲಿಯೊ ಹೀಗೆ ಪರೀಕ್ಷಿಸಿ

ಬಂಗಾರದಂತೆ ಬೆಳ್ಳಿಯನ್ನೂ ಅಸಲಿಯೋ ನಕಲಿಯೋ ಎಂದು ಪರೀಕ್ಷೆ ಮಾಡಬಹುದು. ಈ ಕೆಳಗಿನ ವಿಧಾನ ಅನುಸರಿಸಿ ಇದರಿಂದ ನೀವು ಪ್ರೀತಿಯಿಂದ ಕೊಂಡ …

Leave a Reply

Your email address will not be published. Required fields are marked *

Translate »
error: Content is protected !!
Share to...