Breaking News

ಮಂಗಳೂರು: ಪೊದೆಯಲ್ಲಿ ದೇವರ ವಿಗ್ರಹಗಳು ಪತ್ತೆ..!

ಮಂಗಳೂರು: ನಗರದ ಪಂಪ್‌ವೆಲ್‌-ಕುದ್ಕೋರಿ ಗುಡ್ಡೆ ಮುಖ್ಯರಸ್ತೆಯ ಕುರುಚಲು ಗಿಡಗಳ ಪೊದೆಯ ನಡುವೆ ಪ್ಲಾಸ್ಟಿಕ್‌ ಚೀಲದಲ್ಲಿ ದೇವರ ವಿಗ್ರಹಗಳು ಪತ್ತೆಯಾಗಿವೆ.

ಶಾರದೆಯ ಸುಮಾರು 2.5 ಇಂಚು ಉದ್ದದ ಮತ್ತು 1 ಇಂಚು ಉದ್ದದ, ಗಣಪತಿಯ ಸುಮಾರು 1 ಇಂಚು ಉದ್ದದ, ಲಕ್ಷ್ಮೀ ದೇವಿಯ ಸುಮಾರು 2 ಇಂಚು ಉದ್ದದ, ಶಾರದಾ ದೇವಿಯ ಸುಮಾರು 1 ಇಂಚು ಉದ್ದದ, ಹಿತ್ತಾಳೆಯ ನಂದಿಯ 1 ಇಂಚು ಉದ್ದದ, ಕಂಚಿನ ದತ್ತಾತ್ರೇಯ ದೇವರ 6 ಇಂಚು ಉದ್ದ ಹಾಗೂ ಹಿತ್ತಾಳೆಯ ನಾಗದೇವರ 2 ಇಂಚು ಉದ್ದದ ವಿಗ್ರಹಗಳಿದ್ದು, ವಾರಸುದಾರರು ದಾಖಲೆಗಳೊಂದಿಗೆ ಮಂಗಳೂರು ಪೂರ್ವ ಪೊಲೀಸ್‌ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...