Breaking News

ಹಲಾಲ್‌ ಕಟ್‌ ಮಾಂಸವನ್ನು ಹಿಂದುಗಳು ಸೇವಿಸಬೇಡಿ : ಪ್ರಮೋದ್ ಮುತಾಲಿಕ್‌ ಕರೆ

ಮಂಗಳೂರು : ಹಿಂದುಗಳು ಯಾರೂ ಹಲಾಲ್‌ ಕಟ್ ಮಾಂಸ ಸೇವನೆ ಮಾಡಬಾರದು. ಜಟ್ಕಾ ಕಟ್ ಸೇವನೆ ಮಾತ್ರ ಮಾಡಬೇಕು ಎಂದು ಕಳೆದ ವರ್ಷದ ಯುಗಾದಿ ಮುನ್ನ ಕರೆ ಕೊಟ್ಟಿದ್ದೆವು. ಹಲಾಲ್ ಕಟ್ ಮಾಂಸವನ್ನು ಬಹಿಷ್ಕರಿಸಿ ಜಟ್ಕಾ ಕಟ್ ಪುರಸ್ಕರಿಸಿ ಎನ್ನುವ ಅಭಿಯಾನವನ್ನು ಈ ವರ್ಷವೂ ಮುಂದುವರಿಸಿದ್ದೇವೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ಬೆಂಗಳೂರು, ಕೋಲಾರ ಭಾಗದಲ್ಲಿ ಯುಗಾದಿ ಮರುದಿನ ಮಾಂಸದ ಊಟವನ್ನು ಎಲ್ಲರೂ ಸೇರಿ ಹಬ್ಬದ ವಾತಾವರಣದಂತೆ ಮಾಡುತ್ತಾರೆ. ಹೀಗಾಗಿ ಈ ಬಾರಿ ನಾವು ಮತ್ತೆ ಕರೆ ನೀಡಿದ್ದೇವೆ. ಮುಸ್ಲಿಮರಿಗೋಸ್ಕರ ಇಸ್ಲಾಂನಲ್ಲಿ ಹಲಾಲ್ ಕಟ್ ಇರುವುದು. ಹಿಂದುಗಳಲ್ಲಿ ಅಲ್ಲ. ಹಿಂದುಗಳ ವಿಧಾನದಲ್ಲಿ ಮಾಂಸ, ಕೋಳಿ ಮಾಡುವುದು ಮುಸ್ಲಿಮರು ಹರಾಮ್ ಎಂದು ಹೇಳುತ್ತಾರೆ. ಹಿಂದುಗಳ ವಿಧಾನದಲ್ಲಿ ಮಾಡಿದ ಮಾಂಸವನ್ನು ತಿನ್ನಲಾರದ ಮುಸ್ಲಿಮರು ಇರುವಾಗ ನಾವು ಹಿಂದುಗಳೇಕೆ ಅವರು ಮಾಡುವ ಹಲಾಲ್‌ ಕಟ್ ತಿನ್ನಬೇಕು ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸಿದರು. ಜಮಾಅತ್ ಉಲೇಂ ಹಿಂದ್ ಎನ್ನುವ ಟ್ರಸ್ಟ್‌ಗೆ 2 ಲಕ್ಷ ಕೋಟಿ ಆದಾಯ ಬರುತ್ತಿದೆ. ಇದು ಕೇವಲ ಹಲಾಲ್‌ನಲ್ಲಿ ಬರುತ್ತಿರುವ ದುಡ್ಡು. ಈ ಹಣವನ್ನು ಅವರು ಭಯೋತ್ಪಾದಕ , ಸಮಾಜ ಘಾತುಕ ಕೃತ್ಯಗಳಿಗೆ ಬಳಕೆ ಮಾಡುತ್ತಿದ್ದಾರೆ. ಡಿಜೆ ಹಳ್ಳಿ, ಕೇಜೆ ಹಳ್ಳಿ ಗಲಭೆಗಳ ಹಿಂದೆ ಹಲಾಲ್ ದುಡ್ಡಿನ ಬಳಕೆಯಾಗುತ್ತಿದೆ ಎಂದು ಆರೋಪಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್ ರಾಮಮಂದಿರ ಕಟ್ಟುವುದೇ ಹಿಂದುತ್ವ ಅಲ್ಲ, ಕೇಸರಿ ಶಾಲು ಹಾಕಿಕೊಂಡು ಹೋಗುವುದೇ ಹಿಂದುತ್ವ ಅಲ್ಲ ಎನ್ನುವ ಸೊಕ್ಕಿನ ಹೇಳಿಕೆ ನೀಡಿದ್ದು ಇದನ್ನು ನಾವು ಖಂಡಿಸುತ್ತೇವೆ. ನೀವು ಇವತ್ತು ಈ ಸ್ಥಾನದಲ್ಲಿ ಕೂರಲು ಹಿಂದುತ್ವವೇ ಕಾರಣ. ರಾಮಮಂದಿರ ಕಟ್ಟಿದ್ದೇ ಹಿಂದುತ್ವದ ಅಸ್ಮಿತೆ ಉಳಿಸಲು ಆಗಿದೆ. ಹೀಗಿರುವಾಗ ಹಿಂದುಗಳ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ನಿಮ್ಮ ಹೇಳಿಕೆ ಹಿಂದಕ್ಕೆ ಪಡೆದು ಕ್ಷಮೆ ಯಾಚನೆ ಮಾಡಬೇಕು. ಇಲ್ಲದೇ ಇದ್ದಲ್ಲಿ ಇಡೀ ರಾಜ್ಯಾದ್ಯಂತ ನಾವು ಹೋರಾಟ ಮಾಡಲಿದ್ದೇವೆ ಎಂದು ಸಚಿವ ಸುನಿಲ್ ಕುಮಾರ್‌ಗೆ ಎಚ್ಚರಿಸಿದರು.

About gaitonlennon_rodrigues

Check Also

ಉಡುಪಿ: ಕಾಲೇಜು ಶೌಚಾಲಯ ಚಿತ್ರೀಕರಣ – ಸಂತ್ರಸ್ತೆಯ ಹೇಳಿಕೆ ಪಡೆದ ನ್ಯಾಯಾಲಯ

ಉಡುಪಿ: ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಖಾಸಗಿ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಮುಂದುವರಿದಿದ್ದು, ಪ್ರಕರಣದ ಸಂತ್ರಸ್ತ ವಿದ್ಯಾರ್ಥಿನಿಯಿಂದ ನ್ಯಾಯಾಲಯವು …

Leave a Reply

Your email address will not be published. Required fields are marked *

Translate »
error: Content is protected !!
Share to...