Breaking News

ಮಂಗಳೂರು: ಷೇರು ಮಾರುಕಟ್ಟೆ ಲಾಭಾಂಶ ಆಮಿಷ- 1ಕೋಟಿ ವಂಚಿಸಿದ ಆರೋಪಿ ಅರೆಸ್ಟ್‌

ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಕೊಂಡು ಅಧಿಕ ಲಾಭ ಪಡೆಯಬಹುದೆಂದು ಮಂಗಳೂರಿನ ವ್ಯಕ್ತಿಯೊಬ್ಬರಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡು ವಂಚನೆಗೈದಿರುವ ಪ್ರಕರಣದಲ್ಲಿ ಕೇರಳ ಮೂಲದ ಆರೋಪಿಯನ್ನು ಮಂಗಳೂರು ನಗರ ಸೆನ್‌ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಕೇರಳ ರಾಜ್ಯದ ಕಲ್ಲಿಕೋಟೆಯ ವಲಿಯವಡಲ ನಿವಾಸಿ ಜಿಜೊ ಜಾನ್ ಪಿ.ಕೆ (29), ಬಂಧಿತ ಆರೋಪಿ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದಲ್ಲಿ ಕೋಟ್ಯಂತರ ರೂ. ಲಾಭ ಗಳಿಸಬಹುದೆಂದು ಮಂಗಳೂರಿನ ಶಕ್ತಿನಗರ ನಿವಾಸಿಯೊಬ್ಬರಿಂದ ಆರೋಪಿ 1 ಕೋಟಿ ರೂ. ಅನ್ನು ಬ್ಯಾಂಕ್ ಖಾತೆಗಳಿಗೆ ಹೂಡಿಕೆ ಮಾಡಿಸಿಕೊಂಡಿದ್ದ. ಈ ಹೂಡಿಕೆಯ ಬಳಿಕ ತಿಂಗಳಿಗೆ 15% ಲಾಭಾಂಶ ನೀಡುವುದಾಗಿ ನಂಬಿಸಿದ್ದ. ಆದರೆ ಲಾಭಾಂಶವನ್ನು ಕೊಡದೆ, ಪಡೆದ ಹಣವನ್ನು ವಾಪಸ್ಸು ನೀಡದೇ ವಂಚನೆ ಮಾಡಿದ್ದಾನೆಂದು ಆರೋಪಿಯ ವಿರುದ್ಧ ಸಂತ್ರಸ್ತ ವ್ಯಕ್ತಿ ಪೊಲೀಸ್ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...