Breaking News

ರಂಜಾನ್ ಮಾಸದ ಚಂದ್ರದರ್ಶನ ಹಿನ್ನಲೆ: ನಾಳೆಯಿಂದ ಕರಾವಳಿಯಾದ್ಯಂತ ಉಪವಾಸ ವ್ರತ ಆರಂಭ

ಕ್ಷಿಣ ಕನ್ನಡ: ಇಂದು ರಂಜಾನ್ ಮಾಸದ ಚಂದ್ರದರ್ಶನ ಆಗಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆಯಿಂದ ರಂಜಾನ್ ಉಪವಾಸ ವ್ರತ ಕರಾವಳಿ ಜಿಲ್ಲೆಯಾಧ್ಯಂತ ಆರಂಭಗೊಳ್ಳಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವಂತ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರು, ಇಂದು ರಂಜಾನ್ ಮಾಸದ ಚಂದ್ರದರ್ಶನವಾಗಿದ್ದಾರೆ.

ಹೀಗಾಗಿ ಕರಾವಳಿ ಜಿಲ್ಲೆಯಾಧ್ಯಂತ ನಾಳೆಯಿಂದ ಉಪವಾಸ ವ್ರತ ಆರಂಭಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಂದಹಾಗೇ ರಂಜಾನ್ ಹಬ್ಬವೆಂದರೇ ಸನ್ನಡತೆಯ ಮಾರ್ಗ ತೋರುವುದು. ಮುಸ್ಲಿಮರು ಈ ಹಬ್ಬದಲ್ಲಿ ಕಟ್ಟುನಿಟ್ಟಾಗಿ ವ್ರತ ಆಚರಣೆ ಮಾಡುವುದು ಹಬ್ಬದ ಇನ್ನೊಂದು ಮಹತ್ವದ್ದಾಗಿದೆ. ರಂಜಾನ್ ಸಮಯದಲ್ಲಿ ಒಂದು ತಿಂಗಳು ಮುಸ್ಲಿಮರು ಮಾಡುವ ಉಪವಾಸ ವ್ರತಾಚರಣೆ ತನ್ನದೇ ಆದ ವಿಶೇಷತೆ ಹೊಂದಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ವ್ರತ ಮಾಡುತ್ತಾರೆ.

ಪ್ರತಿ ನಿತ್ಯ 5 ಸಲ ಪ್ರಾರ್ಥನೆ (ನಮಾಜ್) ಮಾಡುವುದರ ಜೊತೆಗೆ ‘ತರಾವಿ’ (ಖುರಾನ್ ವಿಶೇಷ ಪಠಣ) ಮಾಡುತ್ತಾರೆ. ಉಪವಾಸ ವ್ರತಾಚರಣೆಯಲ್ಲಿ ಸಹರಿ ಮತ್ತು ಇಫ್ತಾರ್ ಇರುತ್ತದೆ. ಬೆಳಗಿನ ಜಾವ ‘ಸೆಹ್ರಿ’ (ಉಪವಾಸ ಆರಂಭ) ಪ್ರಾರಂಭಿಸುತ್ತಾರೆ. ರಾತ್ರಿ ಅವಧಿಯಲ್ಲಿ ‘ಇಫ್ತಾರ್’ (ಉಪವಾಸ ಬಿಡುವುದು) ಮಾಡುತ್ತಾರೆ.

ಖುರಾನ್ ಪಠಣ, ದಾನ, ಧರ್ಮ, ದುಡ್ಡಿನ ವ್ಯಾಮೋಹ ಬಿಡುವುದು, ಪರರ ಹಿತ ಚಿಂತನೆಯಂಥ ಖುರಾನ್‌ನಲ್ಲಿ ಪ್ರತಿಪಾದಿತ ಅಂಶಗಳ ಪಾಲನೆ ಮಾಡುತ್ತಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...