Breaking News

ಮಂಗಳೂರು: ಪೊಲೀಸರ ಮೋಸ್ಟ್ ವಾಟೆಂಡ್ ಲಿಸ್ಟ್ ನಲ್ಲಿದ್ದ ಕೃಷ್ಣಾಪುರದ ಅಜರುದ್ದೀನ್ ಅರೆಸ್ಟ್

ಮಂಗಳೂರು;ಮೋಸ್ಟ್ ವಾಟೆಂಡ್ ವಾರಂಟ್ ಆರೋಪಿ ಅಜರುದ್ದೀನ್ ನನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಅಜರುದ್ದೀನ್ ಅಲಿಯಾಸ್ ಅಜರ್(29) ಕಾಟಿಪಳ್ಳದ ಕೃಷ್ಣಾಪುರದವನಾಗಿದ್ದ.

ಈತನ ಮೇಲೆ ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 23 ಪ್ರಕರಣಗಳಲ್ಲಿ ಜಾಮೀನು ರಹಿತ ವಾರಂಟ್ ಇದೆ.

ಮಂಗಳೂರು ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಆಯುಕ್ತರಾದ ಮನೋಜ್‌ ಕುಮಾರ್‌ರವರ ನಿರ್ದೇಶನದಂತೆ ಮಾರ್ಚ್ 22 ರಂದು ಸುರತ್ಕಲ್ ಪೊಲೀಸ್ ಠಾಣೆಯ ನಿರೀಕ್ಷಕರಾದ ಮಹೇಶ್‌ ಪ್ರಸಾದ್‌ ನೇತೃತ್ವದ ತಂಡ ಅಜರ್ ಗೆ ಬಂಧಿಸಿದೆ.

ಬಂಧನದ ಬಳಿಕ ಮಂಗಳೂರು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

About gaitonlennon_rodrigues

Check Also

ಉಡುಪಿ: ಕಾಲೇಜು ಶೌಚಾಲಯ ಚಿತ್ರೀಕರಣ – ಸಂತ್ರಸ್ತೆಯ ಹೇಳಿಕೆ ಪಡೆದ ನ್ಯಾಯಾಲಯ

ಉಡುಪಿ: ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಖಾಸಗಿ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಮುಂದುವರಿದಿದ್ದು, ಪ್ರಕರಣದ ಸಂತ್ರಸ್ತ ವಿದ್ಯಾರ್ಥಿನಿಯಿಂದ ನ್ಯಾಯಾಲಯವು …

Leave a Reply

Your email address will not be published. Required fields are marked *

Translate »
error: Content is protected !!
Share to...