Breaking News

ಬಂಧಿತನಾಗಿದ್ದ ನಟ ಚೇತನ್ ಗೆ ಜಾಮೀನು …!

ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಬಂಧಿತನಾಗಿದ್ದ ನಟ ಚೇತನ್ ಗೆ 32ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.  ಇಪ್ಪತ್ತೈದು ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ನೀಡುವಂತೆ ನ್ಯಾಯಾಧೀಶೆ ಲತಾ ಅವರು ಆದೇಶಿಸಿದ್ದಾರೆ. ಶಿವಕುಮಾರ್ ನೀಡಿದ್ದ ದೂರಿನ ಮೇಲೆ ಚೇತನ್ ಬಂಧನವಾಗಿತ್ತು

ಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಎರಡು ದಿನಗಳ ಹಿಂದೆ ನಟ ಚೇತನ್ ನನ್ನು (Chetan) ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದರು. ಅವರನ್ನು ಕೋರ್ಟಿಗೂ ಹಾಜರುಪಡಿಸಿದ್ದರು. ಪೊಲೀಸರು ಹಾಕಿರುವ ಎಫ್‍ ಐಆರ್ ಆಧರಿಸಿ ನ್ಯಾಯಾಲಯವು  ಚೇತನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು.  ಈ ಸಂದರ್ಭದಲ್ಲಿ ಚೇತನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮಾನ್ಯ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿತ್ತು

About gaitonlennon_rodrigues

Check Also

ಮುಂಬಯಿ :ಲಿವ್ ಇನ್ ಗೆಳತಿಯನ್ನು ಕತ್ತರಿಸಿ ಕುಕ್ಕರ್ ನಲ್ಲಿ ಬೇಯಿಸಿದ ಪ್ರಿಯಕರ

ಮುಂಬೈ ಜೂನ್ 08: ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯನ್ನು ಹತ್ಯೆಗೈದು, ದೇಹದ ಭಾಗವನ್ನು ತುಂಡು ಮಾಡಿ ಅದನ್ನು ಕುಕ್ಕರ್ ನಲ್ಲಿ …

Leave a Reply

Your email address will not be published. Required fields are marked *

Translate »
error: Content is protected !!
Share to...