Breaking News

BREAKING NEWS : ಲೋಕಸಭೆ ಸದಸ್ಯತ್ವ ಸ್ಥಾನದಿಂದ ‘ರಾಹುಲ್’ ಅನರ್ಹ ; ಎಐಸಿಸಿ ಕಚೇರಿಯಲ್ಲಿ ಸಂಜೆ ‘ತುರ್ತು ಸಭೆ’

ವದೆಹಲಿ : 2019ರ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತ್ರ ರಾಹುಲ್ ಗಾಂಧಿ ಅವರನ್ನ ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಕಚೇರಿಯಲ್ಲಿ ಸಂಜೆ 5.30ಕ್ಕೆ ಕಾಂಗ್ರೆಸ್ ತುರ್ತು ಸಭೆ ಕರೆದಿದೆ. ಈ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೇಗೆ ಹೋರಾಟ ನಡೆಸ್ಬೇಕು ಅನ್ನೋದ್ರ ಬಗ್ಗೆ ರೂಪುರೇಷಿ ಸಿದ್ಧಪಡೆಸಲಾಗುತ್ತೆ ಎನ್ನುವ ಮಾಹಿತಿ ಲಭ್ಯವಾಗಿದೆ.

 

ಅಂದ್ಹಾಗೆ, ರಾಹುಲ್ ಗಾಂಧಿ ಗುರುವಾರ (ಮಾರ್ಚ್ 23) ಸೂರತ್ ನ್ಯಾಯಾಲಯವು ಮಾನನಷ್ಟ ಮೊಕದ್ದಮೆಯಲ್ಲಿ ಅವರನ್ನ ದೋಷಿ ಎಂದು ಘೋಷಿಸಿದ್ದು, ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂಪಾಯಿ ದಂಡ ವಿಧಿಸಿದೆ.

ಲೋಕಸಭೆ ಸದಸ್ಯತ್ವ ಅನರ್ಹದ ನಂತ್ರ ಪ್ರತಕ್ರಿಯಿಸಿದ ಕಾಂಗ್ರೆಸ್ ‘ಹೆದರುವುದಿಲ್ಲ ಅಥವಾ ಮೌನವಾಗುವುದಿಲ್ಲ’ ಎಂದು ಹೇಳಿದೆ. ಪಕ್ಷವು ಕಾನೂನು ಮತ್ತು ರಾಜಕೀಯವಾಗಿ ಹೋರಾಟ ನಡೆಸಲಿದೆ ಎಂದು ಕಾಂಗ್ರೆಸ್ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ್ದಾರೆ.

ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸತ್ಯ ಹೇಳಿದಕ್ಕೆ ರಾಹುಲ್ ಗಾಂಧಿ ಅವ್ರ ಸದಸ್ಯತ್ವ ಅನರ್ಹಗೊಳಿಸಿದ್ದಾರೆ. ವ್ಯವಸ್ಥಿತವಾಗಿ ಸತ್ಯ ಹೇಳುವವರನ್ನ ಮುಗಿಸಲಾಗ್ತಿದೆ’ ಎಂದು ಹೇಳಿದರು.

ಇನ್ನು ‘ನಾವು ಈ ಹೋರಾಟವನ್ನ ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಹೋರಾಡುತ್ತೇವೆ. ನಮ್ಮನ್ನು ಹೆದರಿಸುವುದಿಲ್ಲ ಅಥವಾ ಮೌನಗೊಳಿಸಲಾಗುವುದಿಲ್ಲ. ಪಿಎಂ ಸಂಬಂಧಿತ ಅದಾನಿ ಮಹಾಮೇಗಾಸ್ಕ್ಯಾಮ್ಗೆ ಜೆಪಿಸಿ ಬದಲು ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿದೆ. ಭಾರತೀಯ ಪ್ರಜಾಪ್ರಭುತ್ವ ಓಂ ಶಾಂತಿ’ ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ.

About gaitonlennon_rodrigues

Check Also

ಬ್ರೇಕಿಂಗ್‌: ರಾಹುಲ್ ಗಾಂಧಿ ಮೇಲ್ಮನವಿ ಅರ್ಜಿ ವಿಚಾರಣೆ ಆ.4 ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್

ನವದೆಹಲಿ: ‘ಮೋದಿ ಉಪನಾಮ’ ಹೇಳಿಕೆಗಾಗಿ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಲ್ಲಿಸಿದ್ದ …

Leave a Reply

Your email address will not be published. Required fields are marked *

Translate »
error: Content is protected !!
Share to...