Breaking News

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತಗಟ್ಟೆಗಳ ಬದಲಾವಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 202-ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 6 ಮತಗಟ್ಟೆಗಳು ಹಾಗೂ 205 ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2 ಮತಗಟ್ಟೆಗಳ ಬದಲಾವಣೆಯಾಗಿದ್ದು ಕೇಂದ್ರ ಚುನಾವಣಾ ಆಯೋಗ ಇದನ್ನು ಅನುಮೋದನೆ ನೀಡಿದೆ.

ವಿವರ ಇಂತಿದೆ; 202 ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕದ್ರಿಯಲ್ಲಿದ್ದ ಕಿರಿಯ ತಾಂತ್ರಿಕ ಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 131, ಆ ಕಟ್ಟಡ ಶಿಥಿಲಗೊಂಡ ಕಾರಣ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಇರುವ ಕಾರಣ ಅದನ್ನು ಕದ್ರಿಯಲ್ಲಿರುವ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿಗೆ (ಮುಖ್ಯ ಕಟ್ಟಡದ ಪಶ್ಚಿಮ ಭಾಗ) ಬದಲಾವಣೆ ಮಾಡಲಾಗಿದೆ. ಕದ್ರಿಯ ಕಿರಿಯ ತಾಂತ್ರಿಕ ಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 132 ಅನ್ನು ಆ ಕಟ್ಟಡವು ಶಿಥಿಲಗೊಂಡ ಕಾರಣ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಇರುವ ಕಾರಣ ಕದ್ರಿಯಲ್ಲಿರುವ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜ್ (ಮುಖ್ಯ ಕಟ್ಟಡದ ಮಧ್ಯಭಾಗದ ಎಡಬದಿ) ಗೆ ಬದಲಾವಣೆ ಮಾಡಲಾಗಿದೆ. ಕದ್ರಿಯಲ್ಲಿದ್ದ ಕಿರಿಯ ತಾಂತ್ರಿಕ ಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 133 ಅನ್ನು ಆ ಕಟ್ಟಡವು ಶಿಥಿಲಗೊಂಡ ಕಾರಣ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಇರುವ ಕಾರಣ ಕದ್ರಿಯಲ್ಲಿರುವ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜ್ (ಮುಖ್ಯ ಕಟ್ಟಡದ ಮಧ್ಯಭಾಗದ ಬಲಬದಿ) ಗೆ ಬದಲಾವಣೆ ಮಾಡಲಾಗಿದೆ. ಕದ್ರಿಯ ಕಿರಿಯ ತಾಂತ್ರಿಕ ಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 134, ಆ ಕಟ್ಟಡವು ಶಿಥಿಲಗೊಂಡ ಕಾರಣ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಇರುವ ಕಾರಣ ಕದ್ರಿಯಲ್ಲಿರುವ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜ್ (ಮುಖ್ಯ ಕಟ್ಟಡದ ಪೂರ್ವ ಭಾಗ) ಗೆ ಬದಲಾವಣೆ ಮಾಡಲಾಗಿದೆ. ಸೊರಲ್ಪಾಡಿಯ ಅಸುರುದ್ದೀನ್ ಕಂಬ್ಳ ಉರ್ದು ಪ್ರೌಢಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 208ನ್ನು ಆ ಕಟ್ಟಡವು ಶಿಥಿಲ ಗೊಂಡಿರುವುದರಿಂದ ಹಾಗೂ ಅಲ್ಲಿನ ಮತದಾರರು 2ರಿಂದ 3 ಕಿ ಮೀ ವರೆಗೆ ಬಂದು ಮತ ಚಲಾಯಿಸಬೇಕಿರುವ ಕಾರಣ ಬಡಗುಳಿಪಾಡಿಯ ಮಟ್ಟಿ ಅಂಗನವಾಡಿ ಕೇಂದ್ರಕ್ಕೆ ಬದಲಾವಣೆ ಮಾಡಲಾಗಿದೆ. ಉಳ್ಳಾಯಿ ಬೆಟ್ಟು (ಹಳೆಯ ಕಟ್ಟಡ) ಗ್ರಾಮ ಪಂಚಾಯಿತಿ ಕಚೇರಿಯ ಮತಗಟ್ಟೆ ಸಂಖ್ಯೆ 215 ಅನ್ನು ಆ ಕಟ್ಟಡ ಖಾಸಗಿ ಕಟ್ಟಡ ಹಾಗೂ ಶಿಥಿಲವಾಗಿದ್ದು, ಈ ಹಿಂದೆ ಇಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಕಾರ್ಯನಿರ್ವಹಿಸುತ್ತಿದ್ದು ಈಗ ಬೇರೆ ಕಡೆ ವರ್ಗಾವಣೆಗೊಂಡಿರುತ್ತದೆ ಆದ ಕಾರಣ ಪೆರ್ಮಂಕಿ ಆಚೆಬೈಲು ಅಂಗನವಾಡಿ ಕೇಂದ್ರಕ್ಕೆ ಬದಲಾವಣೆ ಮಾಡಲಾಗಿದೆ. ತೆಂಕ ಬೆಳ್ಳೂರು ಸೈಂಟ್ ಮೈಕಲ್ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 48, ಆ ಕಟ್ಟಡವು ತೀರಾ ದುರಸ್ತಿ ಆಗದ ಸ್ಥಿತಿ ಹಾಗೂ ಪ್ರಸ್ತುತ ಶಾಲೆ ಮುಚ್ಚಿರುವ ಕಾರಣ ತೆಂಕ ಬೆಳ್ಳೂರು ಧನುಪೂಜೆ ಅಂಗನವಾಡಿ ಕೇಂದ್ರಕ್ಕೆ ಬದಲಾವಣೆ ಮಾಡಲಾಗಿದೆ. ವಿಟ್ಲ ಪಡ್ನೂರು ಸಮುದಾಯ ಭವನ ಕೊಡಂಗಾಯಿಯ ಮತಗಟ್ಟೆ ಸಂಖ್ಯೆ 214 ಪ್ರಸ್ತುತ ಇರುವ ಮತಗಟ್ಟೆಯ ಮತದಾನ ಪ್ರದೇಶದಲ್ಲಿರದ ಕಾರಣ ವಿಟ್ಲ ಪಡ್ನೂರು ಅಂಗನವಾಡಿ ಕೇಂದ್ರ ಪೆÇೀರ್ಲಪ್ಪಾಡಿಗೆ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...