Breaking News

ಮಲ್ಯ ಕಂಪೆನಿಗೆ ಸಾಲ ಮಂಜೂರು ಮಾಡಿದ ಕೇಸ್ : ಬ್ಯಾಂಕ್ ಮ್ಯಾನೆಜರ್ ಆರೋಪಿ

ಮುಂಬೈ: ಉದ್ಯಮಿ ವಿಜಯ್ ಮಲ್ಯ ಅವರ ಒಡೆತನದ ಕಿಂಗ್‍ಫಿಷರ್ ಏರ್‍ಲೈನ್ಸ್‍ಗೆ ಸಾಲ ನೀಡಲು ಐಡಿಬಿಐ ಬ್ಯಾಂಕ್ ಹಿರಿಯ ಅಕಾರಿ ಸಂಚು ರೂಪಿಸಿದ್ದಾರೆ ಎಂದು ಸಿಬಿಐ ಪೂರಕ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ.ಕಿಂಗಿಷರ್ ಏರ್ಲೈನ್ಸ್ಗೆ ಸಾಲ ಮಂಜೂರು ಮಾಡಲು ಮತ್ತು ವಿತರಿಸಲು ಸಂಚು ರೂಪಿಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ ಮುಂಬೈ ನ್ಯಾಯಾಲಯಕ್ಕೆ ಸಲ್ಲಿಸಿದ ಪೂರಕ ಆರೋಪಪಟ್ಟಿಯಲ್ಲಿ ತಿಳಿಸಿದೆ.

 

ಕಿಂಗ್‍ಫಿಷರ್ ಏರ್‍ಲೈನ್ಸ್ ಐಡಿಬಿಐನಿಂದ 900 ಕೋಟಿ ರೂಪಾಯಿ ಸಾಲ ಪಡೆದು ವಂಚನೆ ಮಾಡಿರುವ ಹಗರಣದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಮುಂಬೈನ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ಮಲ್ಯ ಪ್ರಮುಖ ಆರೋಪಿಯಾಗಿದ್ದು, ಅವರ ವಿರುದ್ಧ ಇತ್ತೀಚೆಗೆ ಸಿಬಿಐ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು.

ಹೆಚ್ಚುವರಿ ದೋಷಾರೋಪಣಾ ಪಟ್ಟಿಯ ಪ್ರಕಾರ, ಐಡಿಬಿಐ ಬ್ಯಾಂಕ್‍ನ ಮಾಜಿ ಪ್ರಧಾನ ವ್ಯವಸ್ಥಾಪಕ ಬುದ್ಧದೇವ್ ದಾಸ್‍ಗುಪ್ತ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಸಾಲ ಮಂಜೂರು ಮಾಡಿದ್ದಾರೆ. 2009ರ ಅಕ್ಟೋಬರ್‍ನಲ್ಲಿ ಕಿಂಗ್‍ಫಿಷರ್ ಏರ್‍ಲೈನ್ಸ್‍ಗೆ 150 ಕೋಟಿ ರೂಪಾಯಿಗಳ ಅಲ್ಪಾವ ಸಾಲ (ಎಸ್ಟಿಎಲ್) ಮಂಜೂರು ಮಾಡಿ, ಹಣ ಬಿಡುಗಡೆ ಮಾಡಿದ್ದರು.

ಈ ಹಗರಣದಲ್ಲಿ ದಾಸ್‍ಗುಪ್ತಾ ಮತ್ತು ಅವರ ಸಹೋದ್ಯೋಗಿಗಳು ಮಲ್ಯ ಅವರೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ. ಹಿಂದಿನ ದೋಷಾರೋಪಣಾ ಪಟ್ಟಿಯಲ್ಲಿ ಹೆಸರಿಸಲಾದ 11 ಆರೋಪಿಗಳ ಜೊತೆಗೆ, ಸಿಬಿಐ ಪೂರಕ ಆರೋಪಪಟ್ಟಿಯಲ್ಲಿ ದಾಸ್‍ಗುಪ್ತಾ ಹೆಸರನ್ನು ಸೇರಿಸಿದೆ.

ವಿಮಾನ ಕಂಪೆನಿಗಳಿಗೆ ಕಿರುಅವಯ ಸಾಲ ನೀಡಬೇಕಾದರೆ ಸಾಗರೋತ್ತರದ ವ್ಯವಹಾರವನ್ನು ಪರಿಗಣಿಸಬೇಕು, ವಿಮಾನ ಬೋಗ್ಯಕ್ಕೆ ನೀಡುವ ಹಾಗೂ ಸೇವೆ ಒದಗಿಸುವವರ ಷರತ್ತುಗಳು ಪೂರೈಕೆಯಾಗಲು ಆರು ತಿಂಗಳ ಕಾಲಾವ ಅಗತ್ಯವಿದೆ.

ದಾಸ್ ಗುಪ್ತಾ,ಕಿಂಗ್‍ಫಿಶರ್ ಕೋರಿದ್ದ ಒಟ್ಟು ಸಾಲದ 750 ಕೋಟಿಯಲ್ಲಿ 150 ಕೋಟಿ ರೂಪಾಯಿಗಳನ್ನು ಹೊಂದಾಣಿಕೆ ಮಾಡಬೇಕಿತ್ತು. ಆದರೆ ಪ್ರತ್ಯೇಕ ಸಾಲ ಎಂದು ಪರಿಗಣಿಸಲಾಗಿದೆ. ಸಾಲದ ಮಿತಿ 750 ಕೋಟಿ ರೂಪಾಯಿಗೆ ಸೀಮಿತವಾಗಬೇಕಿದ್ದರೂ ಪ್ರತ್ಯೇಕ ಸಾಲದಿಂದಾಗಿ 2009ರ ಡಿಸೆಂಬರ್ ವೇಳೆಗೆ ಕಿಂಗ್ ಫಿಷರ್ ಐಡಿಬಿಐ ಬ್ಯಾಂಕ್‍ನಿಂದ ಪಡೆದುಕೊಂಡ ಒಟ್ಟು ಸಾಲದ ಮೊತ್ತ 900 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಸಿಬಿಐ ತನಿಖಾ ವೇಳೆ ಪತ್ತೆ ಹಚ್ಚಿದೆ.

ಸಿಬಿಐ ನ್ಯಾಯಾಲಯದ ಅನುಮತಿಯಂತೆ ಇಂಗ್ಲೆಂಡ್, ಮಾರಿಷಸ್, ಅಮೆರಿಕಾ, ಸ್ವಿಟ್ಜರ್ ಲ್ಯಾಂಡ್‍ಗೆ ತಂಡವನ್ನು ಕಳುಹಿಸಲಾಗಿತ್ತು. ವಿದೇಶಿ ತನಿಖೆಯ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳನ್ನೂ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...