Breaking News

ಮಂಗಳೂರು: ಖಾಸಗಿ ಬಸ್‌ನಡಿಗೆ ಬಿದ್ದು ಮಗು ಸಾವು..!

ಮಂಗಳೂರು: ನಗರದ ಬೆಂದೂರ್‌ವೆಲ್‌ನಲ್ಲಿ ಖಾಸಗಿ ಬಸ್‌ನಡಿಗೆ ಮಗುವೊಂದು ಬಿದ್ದು ಸಾವನ್ನಪ್ಪಿ, ಮಗುವಿನ ತಾಯಿ ಗಂಭೀರ ಗಾಯಗೊಂಡಿರುವ ಘಟನೆ ಇಂದು ಸಂಜೆ ನಡೆದಿದೆ.

ಮೃತಪಟ್ಟ ಮಗುವನ್ನು ಹಾರ್ದಿಕ್‌(7), ಗಾಯಾಳು ತಾಯಿಯನ್ನು ಸ್ವಾತಿ ಎಂದು ಗುರುತಿಸಲಾಗಿದೆ. ಇಂದು ಅಪರಾಹ್ನ 2.45 ರ ಹೊತ್ತಿಗೆ ಸ್ವಾತಿ ತನ್ನ ಪುಟ್ಟ ಮಗನೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಬಸ್‌ ಚಾಲಕನ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ಸ್ಕೂಟಿಯ ಹ್ಯಾಂಡಲ್‌ ಬಸ್‌ಗೆ ತಾಗಿ ಮಗುವಿನ ಸಮೇತ ತಾಯಿ ಕೆಳಗೆ ಬಿದ್ದಿದ್ದಾರೆ.

ಈ ವೇಳೆ ಬಸ್‌ನ ಚಕ್ರದಡಿಗೆ ಮಗು ಸಿಲುಕಿ ಮೃತಪಟ್ಟಿದೆ. ಘಟನೆಯಲ್ಲಿ ತಾಯಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಘಟನೆ ಸಂಬಂಧ ಮಂಗಳೂರು ನಗರ ಪೂರ್ವ ಟ್ರಾಫಿಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...