Breaking News

ಅಮೇರಿಕಾ: ಭೀಕರ ಸುಂಟರಗಾಳಿಗೆ ಅಮೆರಿಕದ ಮಿಸ್ಸಿಸ್ಸಿಪ್ಪಿ ನಗರ ತತ್ತರ…! 23 ಅಧಿಕ ಮಂದಿ ಬಲಿ

ಅಮೇರಿಕಾ: ಭೀಕರ ಸುಂಟರಗಾಳಿಗೆ ಅಮೆರಿಕದ ಮಿಸ್ಸಿಸ್ಸಿಪ್ಪಿ ನಗರ ತತ್ತರಿಸಿದೆ. ಶುಕ್ರವಾರ ತಡರಾತ್ರಿ ಅಪ್ಪಳಿಸಿದ ಸುಂಟರಗಾಳಿಗೆ ಮಿಸ್ಸಿಸ್ಸಿಪ್ಪಿಯಲ್ಲಿ ಕನಿಷ್ಟ 25 ಜನ ಸಾವನ್ನಪ್ಪಿದ್ದು, ಅಲಬಾಮಾದಲ್ಲಿ ಒಂದು ಸಾವಿನ ವರದಿಯಾಗಿದೆ. ಹಲವಾರು ಜನ ಗಾಯಗೊಂಡಿದ್ದಾರೆ. ಬಿರುಗಾಳಿಯ ತೀವ್ರತೆಗೆ ಹಲವು ಪಟ್ಟಣಗಳು ಧ್ವಂಸವಾಗಿದ್ದು, ಜನ ಬೀದಿಗೆ ಬಿದ್ದಿದ್ದಾರೆ.

ಪ್ರಬಲ ಚಂಡಮಾರುತದೊಂದಿಗೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ. ಗಾಳಿಗೆ ಹಲವೆಡೆ ಕಟ್ಟಡಗಳು ಕುಸಿದು ಬಿದ್ದಿದ್ದು, ಮನೆಯ ಮೇಲ್ಛಾವಣಿ ಹಾರಿ ಹೋಗಿವೆ.

ವಾಹನಗಳು ಜಖಂಗೊಂಡಿವೆ. ವಿದ್ಯುತ್ ಸಂಪರ್ಕ ಕಡಿತದಿಂದಾಗಿ 10,000ಕ್ಕೂ ಹೆಚ್ಚು ಮಂದಿಗೆ ತೊಂದರೆ ಎದುರಾಗಿದೆ. ಮಿಸಿಸಿಪ್ಪಿಯ ರಾಲಿಂಗ್ ಫಾರ್ಕ್ ಪಟ್ಟಣದಲ್ಲಿ 2,000ದಷ್ಟು ಮಂದಿ ಮನೆ ಕಳೆದುಕೊಂಡಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...