Breaking News

ಪಾಣೆಮಂಗಳೂರು: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ

ಬಂಟ್ವಾಳ: ಪುತ್ತೂರು ಮೂಲದ ಯುವಕನೋರ್ವ ಪಾಣೆಮಂಗಳೂರಿನ ಗೂಡಿನಬಳಿ ಹಳೆ ಸೇತುವೆಯ ಸಮೀಪ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ನಡೆದಿದೆ.

ಪುತ್ತೂರು ಸಮೀಪ ಕೆಮ್ಮಿಂಜೆ ನಿವಾಸಿ, ಪುತ್ತೂರು ಕೋರ್ಟ್‌ ರಸ್ತೆಯ ವರ್ತಕ ವಿಘ್ನೇಶ್‌ ಕಾಮತ್‌(32) ಅವರು ಆತ್ಮಹತ್ಯೆ ಮಾಡಿಕೊಂಡವರು.

ರವಿವಾರ ಮಧ್ಯಾಹ್ನ 1ರ ಸುಮಾರಿಗೆ ಯುವಕ ಪುತ್ತೂರು ಭಾಗದಿಂದ ಆಗಮಿಸಿ ತಮ್ಮ ಸ್ಕೂಟರನ್ನು ಸೇತುವೆಯ ಮೇಲೆ ನಿಲ್ಲಿಸಿ ನದಿಗೆ ಹಾರಿದ್ದಾರೆ.

ಬಳಿಕ ಸ್ಥಳೀಯ ಈಜುಗಾರ ಯುವಕರು ನದಿಗೆ ಹಾರಿ ಆತನ ರಕ್ಷಣೆಗೆ ಮುಂದಾಗಿದ್ದು, ಮೇಲಕ್ಕೆತ್ತುವ ಸಂದರ್ಭದಲ್ಲಿ ಮೃತಪಟ್ಟಿದ್ದರು. ಪುತ್ತೂರಿನ ಕೋರ್ಟ್‌ ರಸ್ತೆಯಲ್ಲಿ ಅಂಗಡಿ ನಡೆಸುತ್ತಿದ್ದ ಅವರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿಲ್ಲ. ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...