Breaking News

BREAKING NEWS : 17 ವರ್ಷಗಳ ಬಳಿಕ ʻಉಮೇಶ್‌ ಪಾಲ್‌ʼ ಅಪಹರಣ ಪ್ರಕರಣ ತೀರ್ಪು ಪ್ರಕಟ: ಅತಿಕ್ ಅಹ್ಮದ್, ಸಹೋದರ ದೋಷಿ

ವದೆಹಲಿ: ಬಿಎಸ್‌ಪಿ ಶಾಸಕ ರಾಜುಪಾಲ್ ಕೊಲೆ ಪ್ರಕರಣದ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರ ಅಪಹರಣ ಪ್ರಕರಣದಲ್ಲಿ ದರೋಡೆಕೋರ ಅತೀಕ್‌ ಅಹ್ಮದ್‌ ಮತ್ತು ಆತನ ಸಹೋದರ ಖಾಲಿದ್‌ ಅಜೀಂ ದೋಷಿ ಸೇರಿದಂತೆ 11 ಆರೋಪಿಗಳನ್ನು ಪ್ರಯಾಗ್‌ರಾಜ್ ಎಂಪಿ-ಎಎಂಎಲ್ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.

 

2006ರಲ್ಲಿ ಉಮೇಶ್ ಪಾಲ್ ಅವರನ್ನು ಅಪಹರಿಸಲಾಗಿತ್ತು. ಇದರ ವಿಚಾರಣೆಗೆ ಮುನ್ನ ಗ್ಯಾಂಗ್‌ಸ್ಟರ್ ಮತ್ತು ಮಾಜಿ ಸಂಸದ ಅತೀಕ್ ಅಹ್ಮದ್ ಯುಪಿ ಪೊಲೀಸ್ ಕಸ್ಟಡಿಯಲ್ಲಿ ರಕ್ಷಣೆ ನೀಡುವಂತೆ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.

ಈ ಪ್ರಕರಣದಲ್ಲಿ ಜುಲೈ 5, 2007 ರಂದು ಅತೀಕ್, ಅವರ ಸಹೋದರ ಅಶ್ರಫ್ ಮತ್ತು ನಾಲ್ವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ನಂತರ ಪ್ರಕರಣದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ಚಾರ್ಜ್‌ಶೀಟ್‌ನಲ್ಲಿ 11 ಆರೋಪಿಗಳನ್ನು ಉಲ್ಲೇಖಿಸಲಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಉಮೇಶ್ ಪಾಲ್ ಕೂಡ ಕೊಲೆಯಾಗಿದ್ದರು.

ಸೋಮವಾರ ಸಂಜೆಯೇ ಅತೀಕ್‌ನನ್ನು ಗುಜರಾತ್‌ನಿಂದ ಪ್ರಯಾಗ್‌ರಾಜ್‌ನಲ್ಲಿರುವ ನೈನಿ ಜೈಲಿಗೆ ಕರೆತರಲಾಯಿತು. ಇದಲ್ಲದೇ ಅತೀಕ್ ಅಹ್ಮದ್ ಅವರ ಸಹೋದರ ಅಶ್ರಫ್ ಅವರನ್ನು ಬರೇಲಿ ಜೈಲಿನಿಂದ ಪ್ರಯಾಗ್‌ರಾಜ್‌ಗೆ ಕರೆತರಲಾಗಿತ್ತು. ತೀರ್ಪು ಪ್ರಕಟಿಸುವ ವೇಳೆ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿದ್ದರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...