Breaking News

8 ವರ್ಷದ ಮಗನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ತಂದೆ..!

ಕೋಲಾರ;ಎಂಟು ವರ್ಷದ ಮಗನನ್ನು ಪಾಪಿ ತಂದೆಯೊಬ್ಬ ಚೂರಿಯಿಂದ ಇರಿದು ಕೊಲೆ ಮಾಡಿರುವ ಹೃದಯವಿದ್ರಾಹಕ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿ ನಡೆದಿದೆ.

ಎಂಟು ವರ್ಷದ ಬಾಲಕ ಭುವನ್‌ ತೇಜ್‌ ಅಪ್ಪನ ಕೈಯಿಂದ ಕೊಲೆಯಾದ ಮಗ.ಸುಬ್ರಮಣಿ ನಂಗಲಿ ಎಂಬಾತ ಮಗನಿಗೆ ಕೊಲೆ ಮಾಡಿದ್ದಾನೆ‌

ಆರೋಪಿ ಸುಬ್ರಮಣಿ ಈ‌ ಮೊದಲು ತನ್ನ ಪತ್ನಿಯನ್ನು ಕೊಂದು ಜೈಲು ಪಾಲಾಗಿದ್ದ ಎನ್ನಲಾಗಿದ್ದು, ಭುವನ್‌ತೇಜ್‌ ಕೋಲಾರದ ನಂಗಲಿ ಗ್ರಾಮದ ಎಸ್‌ಬಿಐ ಬ್ಯಾಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಅಜ್ಜಿ ಜೊತೆ ವಾಸವಿದ್ದ.

ಜೈಲಿನಿಂದ ಬಂದಿದ್ದ ಸುಬ್ರಮಣಿ ಆಗಾಗ ಕೋಲಾರದ ಮನೆಗೆ ಹೋಗಿ ಮಗನನ್ನು ತನ್ನ ಜತೆ ಬರುವಂತೆ ಒತ್ತಾಯಿಸುತ್ತಿದ್ದ. ಆದರೆ ಭುವನ್‌ ತೇಜ್‌ ಒಪ್ಪುತ್ತಲೇ ಇರಲಿಲ್ಲ.

ಸೋಮವಾರವೂ ಸುಬ್ರಹ್ಮಣ್ಯ ಕೋಲಾರದಲ್ಲಿರುವ ಮನೆಗೆ ಹೋಗಿದ್ದಾನೆ. ಆಗಲೂ ಭುವನ್‌ ಬೆಂಗಳೂರಿಗೆ ಬರಲ್ಲ ಎಂದಿದ್ದಕ್ಕೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ‌.

ಆರೋಪಿ ಕಿರಾತಕ ತಂದೆ ಸುಬ್ರಮಣಿಯನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...