Breaking News

ಮಂಗಳೂರು:ಡಾ. ಪ್ರಸಾದ್ ಭಂಡಾರಿ ಅವರಿಂದ ದ್ವೇಷಪೂರಿತ ಭಾಷಣ-ಕ್ಯಾಥೊಲಿಕ್‌ ಸಭಾದಿಂದ ಜಿಲ್ಲಾ ಎಸ್‌ ಪಿ, ಪೊಲೀಸ್ ಕಮಿಷನರಿಗೆ ದೂರು..!

ಮಂಗಳೂರು : ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾ. ಪ್ರಸಾದ್ ಭಂಡಾರಿ ಅವರು ದ್ವೇಷಪೂರಿತ ಭಾಷಣ ಮಾಡಿದ್ದಾರೆಂದು ಆರೋಪಿಸಿ ಕ್ಯಾಥೊಲಿಕ್‌ ಸಭಾ ಮಂಗಳೂರು ಪ್ರದೇಶ್‌ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಮ್‌ ಅಮಟೆ ಮತ್ತು ಮಂಗಳೂರು ಪೊಲೀಸ್‌ ಕಮಿಷನರ್‌  ಕುಲದೀಪ್‌ ಕುಮಾರ್‌  ಜೈನ್‌ ಅವರಿಗೆ ದೂರು ಸಲ್ಲಿಸಿದೆ. ಡಾ|ಪ್ರಸಾದ್ ಭಂಡಾರಿ ಅವರು  ದ್ವೇಷಪೂರಿತ ಭಾಷಣ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ. ನಿಯೋಗದಲ್ಲಿ ಕೆಥೋಲಿಕ್ ಸಭಾ ಅಧ್ಯಕ್ಷ ಸ್ಟ್ಯಾನಿ ಲೋಬೊ, ಮಂಗಳೂರು ಬಿಷಪ್ ಮತ್ತು ಕೆಥೋಲಿಕ್ ಚರ್ಚ್ ಪರವಾಗಿ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಂ|ಫಾ|ಡಾ|.ಜೆ.ಬಿ.ಸಲ್ಡಾನ್ಹಾ ಮತ್ತು ರಾಯ್ ಕ್ಯಾಸ್ತಲಿನೊ, ಕ್ಯಾಥೋಲಿಕ್ ಸಭಾ ಪದಾಧಿಕಾರಿಗಳಾದ ನೊರೀನ್ ಪಿಂಟೋ, ಅಲ್ಫೋನ್ಸ್ ಫೆರ್ನಾಂಡಿಸ್,  ವಿನೋದ್ ಪಿಂಟೊ, ಫ್ರಾನ್ಸಿಸ್ ಸೆರಾವೊ, ಆರ್ಥರ್ ಡಿ’ಸೋಜಾ, ಲ್ಯಾನ್ಸಿ ಮಸ್ಕರೇನ್ಹಸ್, ಕಾಲಿನ್ ಮಿರಾಂದಾ,  ಸ್ಟ್ಯಾನಿ ಬಂಟ್ವಾಳ್  ಅವರಿದ್ದರು. ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಇಬ್ಭರು ಪೊಲೀಸ್‌ ಅಧಿಕಾರಿಗಳು ನಿಯೋಗಕ್ಕೆ ಭರವಸೆ ನೀಡಿದರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...