Breaking News

ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ಸಹ ಪ್ರಯಾಣಿಕ- ಮೂವರ ಶವ ಪತ್ತೆ

ಕೋಝಿಕ್ಕೋಡ್‌ : ರೈಲಿನ ಸಹ ಪ್ರಯಾಣಿಕನಿಗೆ ವ್ಯಕ್ತಿಯೊಬ್ಬ ಬೆಂಕಿಹಚ್ಚಿದ ಆಘಾತಕಾರಿ ಘಟನೆ ಕೇರಳದಲ್ಲಿ ಸಂಭವಿಸಿದೆ. ಇದರ ಪರಿಣಾಮವಾಗಿ 8 ಪ್ರಯಾಣಿಕರು ಸುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಲಪ್ಪುಳ-ಕಣ್ಣೂರು ಎಕ್ಸ್‌ಕ್ಯೂಟಿವ್‌ ಎಕ್ಸ್‌ಪ್ರೆಸ್‌ ರೈಲಿನ ಡಿ1 ಬೋಗಿಯಲ್ಲಿ ಎ.2ರಂದು ರಾತ್ರಿ ಈ ಘಟನೆ ಸಂಭವಿಸಿದೆ.ಈ ನಡುವೆ ಘಟನೆ ಸಂಭವಿಸಿದ 100 ಮೀಟರ್‌ ಅಂತರದಲ್ಲಿ ಮೂರು ಮೃತದೇಹಗಳು ರೈಲು ಹಳಿ ಪಕ್ಕ ಸಿಕ್ಕಿವೆ. ಮೃತ ಮೂವರು ಒಂದೇ ಕುಟುಂಬದವರು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಬೆಂಕಿ ನೋಡಿ ಗಾಬರಿಯಾಗಿ ರೈಲಿನಿಂದ ಜಿಗಿದಿರುವ ಸಾಧ್ಯತೆಯಿದೆ ಎನ್ನಲಾಗಿದೆ.ಪ್ರಯಾಣಿಕರು ಚೈನ್‌ ಎಳೆದ ಬಳಿಕ ರೈಲಿನ ವೇಗ ತಗ್ಗಿದಾಗ ಬೆಂಕಿ ಹಚ್ಚಿದ ಪಾತಕಿ ಕತ್ತಲಲ್ಲಿ ಇಳಿದು ಪಲಾಯನ ಮಾಡಿದ್ದಾನೆ. ಪೊಲೀಸರು ಬಂದು ಬೆಂಕಿಯನ್ನು ಕ್ಷಿಪ್ರವಾಗಿ ನಂದಿಸಿದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಇಬ್ಬರು ಪ್ರಯಾಣಿಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಒಬ್ಬಾತ ಬೆಂಕಿ ಹಚ್ಚಿದ್ದಾನೆ ಎಂದು ಉಳಿದ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ತಪ್ಪಿಸಿಕೊಂಡಿರುವ ಪಾತಕಿಯನ್ನು ಪೊಲೀಸರು ಹುಡುಕುತ್ತಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...