Breaking News

‘ಸಿಎಂ ಬೊಮ್ಮಾಯಿ’ಗೆ ಬೆಂಬಲ ನೀಡುವುದಾಗಿ ನಟ ಕಿಚ್ಚ ಸುದೀಪ್ ಅಧಿಕೃತ ಘೋಷಣೆ

ಬೆಂಗಳೂರು : ‘ಸಿಎಂ ಬೊಮ್ಮಾಯಿ’ಗೆ ಬೆಂಬಲ ನೀಡುವುದಾಗಿ ನಟ ಕಿಚ್ಚ ಸುದೀಪ್ ಅಧಿಕೃತ ಘೋಷಣೆ ಮಾಡಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್ ‘ಬೊಮ್ಮಾಯಿ ಅವರನ್ನು ಚಿಕ್ಕಂದಿನಿಂದಲೂ ನೋಡಿದ್ದೇನೆ, ಚಿತ್ರರಂಗದ ಕಷ್ಟದ ದಿನಗಳಲ್ಲಿ ಹಲವರು ಬೆಂಬಲ ನೀಡಿದ್ದರು.

ಅದರಲ್ಲಿ ಸಿಎಂ ಬೊಮ್ಮಾಯಿಯುವರು ಬಹಳ ಸಪೋರ್ಟ್ ಮಾಡಿದ್ದಾರೆ. ಹಾಗಾಗಿ ಆ ವ್ಯಕ್ತಿಗೆ ಬೆಂಬಲ ನೀಡುತ್ತೇನೆ, ನಾನು ನನ್ನ ಅಂಕಲ್ ಗೆ ಸಪೋರ್ಟ್ ಮಾಡುತ್ತೇನೆ, ಈ ವ್ಯಕ್ತಿ ನನಗೆ ಬಹಳ ಬೇಕಾಗಿರುವುದರಿಂದ ನಾನು ಈ ವ್ಯಕ್ತಿಗೆ ಬೆಂಬಲ ನೀಡುತ್ತೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

ಇದಕ್ಕೂ ಮೊದಲು ಮಾತನಾಡಿದ್ದ ನಟ ಕಿಚ್ಚ ಸುದೀಪ್ ‘ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ, ನಾನು ಯಾರಿಗೂ ಟಿಕೇಟ್ ನೀಡುವಂತೆ ಮನವಿ ಮಾಡಿಕೊಂಡಿಲ್ಲ, ಆ ಮಟ್ಟಿಗೆ ನಾನು ಬೆಳೆದು ಕೂಡ ಇಲ್ಲ ಎಂದು ಹೇಳಿದ್ದರು.

ಎಲ್ಲ ಪಾರ್ಟಿಯಲ್ಲಿ ಕೂಡ ನನ್ನ ಆತ್ಮೀಯರು ಕೂಡ ಇದ್ದಾರೆ, ನನ್ನ ಜೊತೆಗೆ ಬೆಂಬಲವಾಗಿ ನಿಂತಿದವರ ಪರವಾಗಿ ಕೂಡ ನಿಲ್ಲುವೆ ಅಂಥ ಹೇಳಿದೆ. ಇಂದು ಸಿಎಂ ಇಂದು ನಡೆಸುತ್ತಿರುವ ಪತ್ರಿಕಾಗೋಷ್ಠಿಗೆ ಹೋಗುತ್ತಿರುವುದಾಗಿ ತಿಳಿಸಿದ್ದ ನಟ ಸುದೀಪ್ ನಾನು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವುದಾಗಿ ತಿಳಿಸಿದ್ದರು.. ಇದೇ ವೇಳೇ ಅವರು ನನ್ನ ಕೆಲವರಿಗಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಕೂಡ ಇದೇ ಅಂತ ಹೇಳಿದ್ದರು. ಬೆದರಿಕೆ ಪತ್ರಕ್ಕೆ ಸಂಬಂಧಪಟ್ಟಂತೆ ಅವರು ಮಾತನಾಡಿ, ನಾನು ಯಾವುದಕ್ಕೂ, ಯಾರಿಗೂ ಹೆದರುವುದಿಲ್ಲ ಎಂದು ಹೇಳಿದ್ದರು

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...