Breaking News

ಮಂಗಳೂರು: ಮನೆಯವರು ಚರ್ಚ್‌ಗೆ ಹೋದ ವೇಳೆ ಚಿನ್ನಾಭರಣ ಕಳವು..!

ಮಂಗಳೂರು: ಮನೆಯವರು ಚರ್ಚ್‌ಗೆ ಹೋದ ವೇಳೆ ಮನೆಯಲ್ಲಿದ್ದ ನಗದು ಹಣ ಮತ್ತು ಚಿನ್ನಾಭರಣ ಕಳವು ಮಾಡಿರುವ ಘಟನೆ ಕುಡುಪು ಪೆದಮಲೆಯಲ್ಲಿ ಸಂಭವಿಸಿದೆ.

ಪ್ರವೀಣ್‌ ಮೊಂತೆರೋ ಅವರು ಗುಡ್‌ಫ್ರೈಡೆ ಪ್ರಯುಕ್ತ ಎ.7ರಂದು ಸಂಜೆ 5.45ಕ್ಕೆ ಮನೆಗೆ ಬೀಗ ಹಾಕಿ ಕುಟುಂಬ ಸಮೇತರಾಗಿ ಚರ್ಚ್‌ಗೆ ತೆರಳಿದ್ದರು.

ಪ್ರಾರ್ಥನೆ ಮುಗಿಸಿ ರಾತ್ರಿ 7.45ಕ್ಕೆ ವಾಪಸಾಗಿದ್ದರು. ಬೀಗ ತೆಗೆದು ಮನೆಯೊಳಗಡೆ ಬಂದು ನೋಡಿದಾಗ ಮನೆಯ ಹಂಚುಗಳನ್ನು ತೆಗೆದು ಯಾರೋ ಮನೆಯೊಳಗಡೆ ಪ್ರವೇಶಿಸಿ ಕೋಣೆಯಲ್ಲಿ ಬೀಗ ಹಾಕಿದ್ದ ಕಬ್ಬಿಣದ ಕಪಾಟಿನ ಬಾಗಿಲು ಮುರಿದು ಬ್ಯಾಗ್‌ನಲ್ಲಿದ್ದ 20 ಗ್ರಾಂನ ಚಿನ್ನದ ಸರ, 8 ಗ್ರಾಂನ ಚಿನ್ನದ ಒಂದು ಜತೆ ಬೆಂಡೋಲೆ, 4 ಗ್ರಾಂನ ಉಂಗುರ, ಕೋಣೆಯ ಕಪಾಟಿನಲ್ಲಿ ಬಾಕ್ಸ್‌ನಲ್ಲಿಟ್ಟಿದ್ದ ಸುಮಾರು 4,000 ರೂ. ನಗದು ಕಳವು ಮಾಡಿದ್ದಾರೆ. ಕಳವಾದ ಆಭರಣಗಳ ಒಟ್ಟು ಮೌಲ್ಯ 1.20 ಲ.ರೂ. ಆಗಿರಬಹುದು ಎಂದು ಕಂಕನಾಡಿ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...