Breaking News

ರಾಜಕೀಯ ಪಕ್ಷವೊಂದರ ಕಾರ್ಯಕ್ರಮದ ಸ್ಥಳದಲ್ಲಿ ಸಿಲಿಂಡರ್ ಸ್ಪೋಟ..! ದಂಪತಿ ದೇಹಗಳು ಛಿದ್ರ, ಹಲವರಿಗೆ ಗಂಭೀರ ಗಾಯ

ತೆಲಂಗಾಣ; ಖಮ್ಮಂ ಜಿಲ್ಲೆಯಲ್ಲಿ ಬಿಆರ್‌ಎಸ್ ಸಭೆಯ ವೇಳೆ ಪಟಾಕಿ ಸಿಡಿಸಿದ್ದರಿಂದ ಬೆಂಕಿ ಹೊತ್ತಿಕೊಂಡು ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ.

ವೈರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರೇಪಲ್ಲಿ ಮಂಡಲದ ಚೀಮಲಪಾಡು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಭಾರತ್ ರಾಷ್ಟ್ರ ಸಮಿತಿ (BRS)ನ ನಡೆಯುತ್ತಿರುವ ಆತ್ಮೀಯ ಸಮ್ಮೇಳನದ ಸಭೆಯಲ್ಲಿ ಕೆಲವು ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿದ್ದಾರೆ. ಪಟಾಕಿಯ ಬೆಂಕಿಯ ಪರಿಣಾಮವಾಗಿ ಗುಡಿಸಲಿನಲ್ಲಿದ್ದ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಉರಿಯುತ್ತಿದ್ದ ಪಟಾಕಿಗಳಲ್ಲಿ ಒಂದು ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದೆ.

ಇಬ್ಬರು ವ್ಯಕ್ತಿಗಳು ಈ ವೇಳೆ ಮೃತಪಟ್ಟಿದ್ದು, ಪೊಲೀಸ್ ಮತ್ತು ಪತ್ರಕರ್ತರು ಸೇರಿ ಹಲವರು ಗಾಯಗೊಂಡಿದ್ದಾರೆ.
ಸ್ಫೋಟದ ರಭಸಕ್ಕೆ ವ್ಯಕ್ತಿಯ ಕಾಲು ಹಾಗೂ ಕೈಗಳು ತುಂಡಾಗಿವೆ.

ಮೂಲಗಳ ಪ್ರಕಾರ ಘಟನೆಯಲ್ಲಿ ಗಾಯಗೊಂಡಿರುವ ಇತರ ನಾಲ್ವರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಸ್ಫೋಟದಲ್ಲಿ ಗಾಯಗೊಂಡ ದಂಪತಿಗಳು ತಮ್ಮ ಕೈಕಾಲುಗಳನ್ನು ಕಳೆದುಕೊಂಡಿದ್ದಾರೆ.ಮೃತರನ್ನು ಬೋನುತ್ ರಮೇಶ್ ಮತ್ತು ಅಂಗೋಟು ಮಂಗು ಎಂದು ಗುರುತಿಸಲಾಗಿದೆ.

ಖಮ್ಮಂ ಸಂಸದ ನಾಮ ನಾಗೇಶ್ವರ ರಾವ್, ಶಾಸಕ ರಾಮುಲು ನಾಯ್ಕ್ ಸೇರಿದಂತೆ ಪಕ್ಷದ ಮುಖಂಡರನ್ನು ಸ್ವಾಗತಿಸಲು ಬಿಆರ್‌ಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು.

ಗಾಯಾಳುಗಳನ್ನು ಬಿಆರ್‌ಎಸ್ ಮುಖಂಡರ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.ಆದರೆ ಘಟನೆಗೂ ಪಕ್ಷದ ಸಭೆಗೂ ಯಾವುದೇ ಸಂಬಂಧವಿಲ್ಲ ಎಂದು ನಾಗೇಶ್ವರ ರಾವ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...