Breaking News

ಅರುಣ್ ಪುತ್ತಿಲ ಪಕ್ಷೇತರವಾಗಿ ಸ್ಪರ್ಧೆ..? ತುರ್ತು ಸಭೆ

ಪುತ್ತೂರು;ಬಿಜೆಪಿ ಮೊದಲ ಪಟ್ಟಿಯಲ್ಲಿ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡಲಾಗಿತ್ತು.ಇದರಿಂದಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿತ ಶಾಸಕ ಸಂಜೀವ ಮಠಂದೂರು, ಅರಣ್ ಪುತ್ತಿಲ ಬಳಗದಲ್ಲಿ ಅಸಮಾಧಾನ ಭುಗಿಲೆದ್ದಿತ್ತು.

ಟಿಕೆಟ್ ಕೈತಪ್ಪಿದ ಹಿನ್ನೆಲೆ ಹಿಂದೂ ಸಂಘಟನೆಯ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರ ಬೆಂಬಲಿಗರು ಸಭೆ ನಡೆಸಿದ್ದರು.ಸಭೆಯಲ್ಲಿ ಪಕ್ಷೇತರಾಗಿ ಸ್ಪರ್ಧಿಸಲು ಆಗ್ರಹ ಕೇಳಿ ಬಂದಿದ್ದು, ಎರಡು ದಿನದೊಳಗೆ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅರುಣ್‌ ಕುಮಾರ್‌ ಪುತ್ತಿಲ, ಕಾರ್ಯಕರ್ತರ ಧ್ವನಿ ವಿಧಾನಸಭೆಯಲ್ಲಿ ಮೊಳಗಬೇಕಾದರೆ ಕಾರ್ಯಕರ್ತರ ನೋವು ನಲಿವು ಅರಿತಿರುವ ಸಂಘಟನೆಯಲ್ಲಿ ದುಡಿಯುವವರಿಗೆ ಅವಕಾಶ ಸಿಗಬೇಕು.ಆದರೆ ಕೆಲವು ವರ್ಷಗಳಿಂದ ಕಾರ್ಯಕರ್ತರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ.ಹಿಂದುತ್ವದ ಧ್ವನಿಯನ್ನು ಮತ್ತೆ ಮುನ್ನಲೆಗೆ ತರಲು ನೀವು ಸೇರಿದ್ದೀರಿ ಎಂದು ಹೇಳಿದ್ದಾರೆ‌.

ಪಕ್ಷವು ನಿಮ್ಮ ಭಾವನೆಗಳಿಗೆ ಬೆಲೆ ನೀಡದಿದ್ದರೆ ನಿಮ್ಮ ಧ್ವನಿಯಾಗಿ ಕೆಲಸ ಮಾಡಲು ಇನ್ನೆರಡು ದಿನದಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಅವರು ಘೋಷಿಸಿದರು.

ಇದೇ ವೇಳೆ ಸಭೆಯಲ್ಲಿ ಪುತ್ತೂರು ಹಿಂದುತ್ವದ ಕೋಟೆ. ಇಲ್ಲಿ ಹಿಂದುತ್ವದ ಅಸ್ಮಿತೆ ಉಳಿಯಬೇಕು.ಪುತ್ತೂರಿನಂತಹ ಕ್ಷೇತ್ರದಲ್ಲಿ ಜಾತಿ ಆಧಾರಿತವಾಗಿ ಪಕ್ಷ ಟಿಕೆಟ್‌ ನೀಡುವುದಲ್ಲ ಎಂದು ಹಲವರು ಅಭಿಪ್ರಾಯವನ್ನು ಹೇಳಿದ್ದಾರೆ.

ಪುತ್ತೂರಿನ‌ ಪ್ರಮುಖ ಸಭಾಂಗಣವೊಂದರಲ್ಲಿ ನೂರಾರು ಮಂದಿ ಸೇರಿ ಅರುಣ್ ಪುತ್ತಿಲ ಅವರಿಗೆ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...