Breaking News

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಮೌಲಾನಾ ರಾಬೆ ಹಸನಿ ನದ್ವಿ ನಿಧನ

ಲಕ್ನೋ: ಜಗದ್ವಿಖ್ಯಾತ ಇಸ್ಲಾಮಿಕ್‌ ವಿದ್ವಾಂಸ ಹಾಗೂ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಮೌಲಾನ ರಬೆ ಹಸನಿ ನದ್ವಿ ಅಲ್ಪಕಾಲದ ಅಸೌಖ್ಯದಿಂದ ಗುರುವಾರ ತಮ್ಮ 93ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಭಾರತದ ಮುಸ್ಲಿಂ ಸಮುದಾಯದ ಅತ್ಯಂತ ಗೌರವಾನ್ವಿತ ವಿದ್ವಾಂಸರಾಗಿದ್ದ ಅವರು ಇಸ್ಲಾಮಿಕ್‌ ಶಿಕ್ಷಣ ಹಾಗೂ ಅಂತರ-ಧರ್ಮೀಯ ಸೌಹಾರ್ದತೆಗೆ ಮಹತ್ವದ ಕೊಡುಗೆ ನೀಡಿದ್ದರು. ಉತ್ತರ ಪ್ರದೇಶ ರಾಯ್‌ಬರೇಲಿ ಜಿಲ್ಲೆಯಲ್ಲಿ 1929ರಲ್ಲಿ ಜನಿಸಿದ್ದ, ಮೌಲಾನ ರಬೆ ನದ್ವಿ, ಲಕ್ನೋದ ಖ್ಯಾತ ಇಸ್ಲಾಮಿಕ್‌ ವಿದ್ಯಾಸಂಸ್ಥೆ ನದ್ವತುಲ್‌ ಉಲಮದಲ್ಲಿ ಇಸ್ಲಾಮಿಕ್‌ ಅಧ್ಯಯನದ ಶಿಕ್ಷಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಮುಂದೆ 2011ರಲ್ಲಿ ಅವರನ್ನು ಆ ಸಂಸ್ಥೆಯ ಚಾನ್ಸಲರ್‌ ಆಗಿ ನೇಮಿಸಲಾಗಿತ್ತು ಹಾಗೂ ತಮ್ಮ ಜೀವನದ ಕೊನೆಯವರೆಗೆ ಆ ಹುದ್ದೆಯಲ್ಲಿ ಅವರು ಮುಂದುವರೆದಿದ್ದರು. ಇಸ್ಲಾಮಿಕ್‌ ಸಿದ್ಧಾಂತ ಹಾಗೂ ಪವಿತ್ರ ಕುರಾನ್‌ ಕುರಿತ ಕೃತಿ ಸಹಿತ ಹಲವಾರು ಕೃತಿಗಳನ್ನು ಬರೆದಿದ್ದ ಮೌಲಾನ ಅವರು ಖ್ಯಾತ ಲೇಖಕರೂ ಆಗಿದ್ದರು. ಧಾರ್ಮಿಕ ಸೌಹಾರ್ದತೆಗೆ ಒತ್ತು ನೀಡುತ್ತಿದ್ದ ಅವರು ವಿವಿಧ ಧರ್ಮಗಳ ನಡುವಿನ ಬಾಂಧವ್ಯ ವೃದ್ಧಿಸುವ ಉದ್ದೇಶ ಹೊಂದಿದ್ದ ಹಲವಾರು ಸಮ್ಮೇಳನಗಳು ಮತ್ತು ವಿಚಾರ ಸಂಕಿರಣಗಳಲ್ಲೂ ಭಾಗವಹಿಸಿದ್ದರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...