Breaking News

ಕಾಂಗ್ರೆಸ್‌ 3 ನೇ ಪಟ್ಟಿ ಬಿಡುಗಡೆ: ಪುತ್ತೂರಿಗೆ ಅಶೋಕ್‌ ರೈ, ಮಂಗಳೂರು ದಕ್ಷಿಣಕ್ಕೆ ಜೆ.ಆರ್‌ ಲೋಬೋ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್‌ 3 ನೇ ಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಕರಾವಳಿಯ ಹೈ ವೋಲ್ಟೇಜ್‌ ಕ್ಷೇತ್ರಗಳಾದ ಪುತ್ತೂರು, ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಹೆಸರು ಘೊಷಣೆಯಾಗಿದೆ. ಮಂಗಳೂರು ಉತ್ತರಕ್ಕೆ ಇನ್ನೂ ಟಿಕೆಟ್‌ ಘೋಷಣೆ ಮಾಡಿಲ್ಲ. ಪುತ್ತೂರು ಕ್ಷೇತ್ರದಿಂದ ಶಕುಂತಳಾ ಶೆಟ್ಟಿ ಹಾಗೂ  ಅಶೋಕ್‌ ರೈಗೆ ಮಧ್ಯೆ ತೀವ್ರ ಪೈಪೋಟಿ ಇತ್ತು ಇದೀಗ ಅಶೋಕ್‌ ರೈಗೆ ಟಿಕೆಟ್‌ ಪಾಲಾಗಿದೆ ಹಾಗೂ ಮಂಗಳೂರು ದಕ್ಷಿಣದಿಂದ ಪದ್ಮರಾಜ್‌ ಹೆಸರು ಕೇಳಿಬಂದಿತ್ತಾದರೂ ಕೊನೆಗೆ ಮಾಜಿ ಶಾಸಕ ಜೆ.ಆರ್‌ ಲೋಬೋಗೆ ಟಿಕೆಟ್‌ ಘೋಷಿಸಿದೆ.

ಇನ್ನುಳಿದಂತೆ ಮಂಗಳೂರು ಉತ್ತರ ಟಿಕೆಟ್‌ 4 ನೇ ಪಟ್ಟಿಯಲ್ಲಿ ಬರಲಿದೆ. ಸದ್ಯ 58 ಕ್ಷೇತ್ರಗಳಲ್ಲಿ 43 ಕ್ಷೇತ್ರಕ್ಕೆ ಮೂರನೇ ಪಟ್ಟಿಯಲ್ಲಿ ಹೆಸರು ಘೋಷಿಸಿದ್ದರು. ಇನ್ನುಳಿದ ಕ್ಷೇತ್ರಕ್ಕೆ ಎರಡು ಮೂರು ದಿನಗಳಲ್ಲಿ ಹೆಸರು ಘೋಷಣೆಯಾಗಲಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...