Breaking News

ಬಿಜೆಪಿ ಪಕ್ಷಕ್ಕೆ ಗುಡ್‌ ಬೈ ಹೇಳಿದ ಮಾಜಿ ಸಿಎಂ ಶೆಟ್ಟರ್‌

ಹುಬ್ಬಳ್ಳಿ: ಲಕ್ಷ್ಮಣ ಸವದಿ ನಂತರ ಬಿಜೆಪಿಯ ಬಹುದೊಡ್ಡ ವಿಕೆಟ್‌ ಪತನವಾಗಿದೆ. ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ತಮ್ಮ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಇಂದು ಬೆಳಗ್ಗೆ ರಾಜೀನಾಮೆ ನೀಡಲಿದ್ದಾರೆ. ನಿನ್ನೆ ತಡರಾತ್ರಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಜೊತೆ ಮಾತುಕತೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಲ್ಕು ದಶಕಗಳ ಕಾಲ ಪಕ್ಷವನ್ನು ಕಟ್ಟಿದ್ದ ನನಗೆ ತಿಂಗಳ ಹಿಂದೆ ಹೇಳಿದ್ದರೆ ಚುನಾವಣಾ ನಿವೃತ್ತಿಯಾಗುತ್ತಿದ್ದೆ. ಇಂದು ಭೇಟಿ ನೀಡಿದ ಧರ್ಮೇಂದ್ರ ಪ್ರದಾನ್‌ ಸಹಿತ ಹಿರಿಯ ಮುಖಂಡರು ನಿಮ್ಮ ಕುಟುಂಬಸ್ಥರಿಗೆ ಟಿಕೆಟ್‌ ನೀಡುತ್ತೇವೆ ಅಥವಾ ಪಕ್ಷದಲ್ಲಿ ಉನ್ನತ ಸ್ಥಾನ ನೀಡುತ್ತೇವೆ ಎಂದಿದ್ದರು.  ಆಗ ನಾನು ನಮ್ಮ ಕುಟುಂಬಸ್ಥರು ಯಾರೂ ನಿಲ್ಲುವುದಿಲ್ಲ. ಟಿಕೆಟ್‌ ಕೊಡುವುದಿದ್ದರೆ ನನಗೆ ಕೊಡಿ. ಜಗದೀಶ್‌ ಶೆಟ್ಟರ್‌ಗೆ ಯಾಕೆ ಟಿಕೆಟ್‌ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದೇನೆ. ನನ್ನ ಮೇಲೆ ಯಾವುದೇ ಆರೋಪವಿಲ್ಲ, ನನ್ನ ಮೇಲೆ ಯಾವುದೇ ಕೇಸುಗಳಿಲ್ಲ. ನಾನೇನು ರೌಡಿಶೀಟರ್‌ ಅಲ್ಲ. ನನ್ನ ಯಾವುದೇ ಸಿ.ಡಿಗಳಿಲ್ಲ. ಆಂತರಿಕ ಚುನಾವಣೆಯಲ್ಲಿ ನನಗೆ ಬಹುಮತ ಸಿಕ್ಕಿದೆ. ಹಾಕಿದ್ದರೂ ನನಗೆ ಯಾಕೆ ಟಿಕೆಟ್‌ ಕೊಟ್ಟಿಲ್ಲ ಎಂದು ಧರ್ಮೇಂದ್ರ ಪ್ರದಾನ್‌ಗೆ ಪ್ರಶ್ನಿಸಿದ್ದೇನೆ. ಅದಕ್ಕೆ ಅವರ ಬಳಿ ಉತ್ತರವಿಲ್ಲ. ಇಂದು ಬೆಳಗ್ಗೆ ಶಿರಸಿಗೆ ತೆರಳಿ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸುತ್ತೇನೆ. ಜೊತೆಗೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಲಿದ್ದೇನೆ ಎಂದು ಅತ್ಯಂತ ಭಾವುಕರಾಗಿ ಹೇಳಿದರು. ಮುಂದಿನ ನಿರ್ಧಾರದ ಬಗ್ಗೆ ಇಂದು ಪ್ರಮುಖ ಹಿತೈಷಿಗಳೊಂದಿಗೆ ಮಾತನಾಡಿ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...