Breaking News

ದುಬೈ: ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅಗ್ನಿ ಅವಘಡ..! ಭಾರತೀಯರು ಸೇರಿ 16 ಮಂದಿ ಸಾವು

ದುಬೈ: ದುಬೈನ ಅಲ್ ರಾಸ್ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ನಾಲ್ವರು ಭಾರತೀಯರು ಸೇರಿ 16 ಮಂದಿ ಸಾವಿಗೀಡಾಗಿದ್ದಾರೆ.

ಸಾವಿಗೀಡಾದವರವಲ್ಲಿ ಕೇರಳ ಮೂಲದ ರಿಜೇಶ್ ಕಲಾಂಗಡನ್(38) ಮತ್ತು ಅವರ ಪತ್ನಿ ಜೇಶಿ ಕಂದಮಂಗಲತ್(32) ಇದ್ದಾರೆ.

ದುರಂತ ಸಂಭವಿಸುವ ವೇಳೆ ಈ ಭಾರತೀಯ ದಂಪತಿಗಳು ತಮ್ಮ ನೆರೆಹೊರೆಯವರಿಗಾಗಿ ಇಫ್ತಾರ್ ಕೂಟವನ್ನು ಸಿದ್ಧಪಡಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಶನಿವಾರ ಸಂಜೆ ತಮ್ಮ ಮುಸ್ಲಿಂ ನೆರೆಹೊರೆಯವರ ಉಪವಾಸ ವೃತ ಬಿಡುವಿನ ವೇಳೆಗೆ ರಿಜೇಶ್ ದಂಪತಿ ವಿಷು ಆಹಾರ ಸಿದ್ಧಪಡಿಸುತ್ತಿದ್ದರು ಎನ್ನಲಾಗಿದೆ.

ರಿಜೇಶ್ ಕಲಾಂಗಡನ್ ಅವರು ಪ್ರಯಾಣ ಮತ್ತು ಪ್ರವಾಸೋದ್ಯಮ ಕಂಪನಿಯ ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕರಾಗಿದ್ದರೆ, ಅವರ ಪತ್ನಿ ಶಾಲಾ ಶಿಕ್ಷಕಿ ಆಗಿದ್ದರು.

ಈ ದಂಪತಿ ಶನಿವಾರ ತಮ್ಮ ಮುಸ್ಲಿಂ ನೆರೆಹೊರೆಯವರಾದ ಕೇರಳದ ಬ್ಯಾಚುಲರ್ ಗುಂಪನ್ನು ಇಫ್ತಾರ್‌ಗೆ ಆಹ್ವಾನಿಸಿದ್ದ ಇವರು ಅದಕ್ಕಾಗಿ ವಿಷು ಸದ್ಯ ಸಿದ್ಧತೆಯಲ್ಲಿ ತೊಡಗಿದ್ದರು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಅಪಾರ್ಟ್‌ಮೆಂಟ್ ಸಂಖ್ಯೆ 409 ರಲ್ಲಿ ಏಳು ಕೊಠಡಿ ಸಹವಾಸಿಗಳೊಂದಿಗೆ ವಾಸಿಸುತ್ತಿದ್ದ ರಿಯಾಸ್ ಕೈಕಂಬಮ್, ಈ ದಂಪತಿ ಅಪಾರ್ಟ್‌ಮೆಂಟ್ ಸಂಖ್ಯೆ 406 ರಲ್ಲಿ ವಾಸಿಸುತ್ತಿದ್ದರು.ಫ್ಲಾಟ್ 405ಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಈ ದಂಪತಿ ಸಾವಿನ ಸುದ್ದಿ ಕೇಳಿದ ಬಳಿಕ ಅಲ್ಲಿನ ನೆರೆಯ ಯುವಕರು ದಿಗ್ಬ್ರಾಂತರಾಗಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...