Breaking News

ಶೆಟ್ಟರ್‌ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಆನೆ ಬಲ: ರಣದೀಪಸಿಂಗ್‌ ಸುರ್ಜೇವಾಲಾ

ಹುಬ್ಬಳ್ಳಿ :  ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಬಳಿಕ ಇದೇ ಮೊದಲ ಬಾರಿಗೆ ಶೆಟ್ಟರ್‌ ನಿವಾಸಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪಸಿಂಗ್‌ ಸುರ್ಜೇವಾಲಾ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಪಕ್ಷಕ್ಕೆ ಶೆಟ್ಟರ್‌ ಬಂದಿರುವುದು ಆನೆ ಬಲಬಂದಂತಾಗಿದೆ ಎಂದರು.

ಬಿಜೆಪಿಗೆ ಲಿಂಗಾಯತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣುವುದೇ ಅಜೆಂಡಾ ಎಂದು ಕಿಡಿಕಾರಿದ ಅವರು, ಪಕ್ಷವನ್ನು ಕಟ್ಟಿಬೆಳೆಸಲು ಹಗಲಿರಳು ಶ್ರಮಿಸಿದವರನ್ನು ಮೂಲೆಗುಂಪು ಮಾಡುವ ಮೂಲಕ ಅಪಮಾನಿಸುತ್ತಿದೆ. ಈ ಮೂಲಕ ಬಿಜೆಪಿಯು ತಾನು ತೋಡುವ ಖೆಡ್ಡಾಕ್ಕೆ ತಾನೇ ಬೀಳಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಿ. ಇದನ್ನರಿತು ಈಗಲಾದರೂ ಅನ್ಯರಿಗೆ ಖೆಡ್ಡಾ ತೋಡುವುದನ್ನು ಬಿಟ್ಟು ಹಿರಿಯರನ್ನು ಗೌರವಿಸುವುದನ್ನು ಕಲಿಯಬೇಕು ಎಂದರು.

 

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...