Breaking News

ಸೌದಿ ಅರೇಬಿಯಾ: ಕಾರು ಅಪಘಾತದಲ್ಲಿ ಕೇರಳ ಮಲಪ್ಪುರಂ ನಿವಾಸಿ ತಾಯಿ ಮಗು ಮೃತ್ಯು

ಸೌದಿ ಅರೇಬಿಯಾ; ರಿಯಾದ್ ನಲ್ಲಿ ನಡೆದ ಕಾರು ಅಪಘಾತದಲ್ಲಿ ಕೇರಳ ಮಲಪ್ಪುರಂ ನಿವಾಸಿ ತಾಯಿ ಮಗು ಮೃತಪಟ್ಟ ಘಟನೆ ನಡೆದಿದೆ.

ಮಲಪ್ಪುರಂ ಕೊಡಕ್ಕಾಡ್ ಮೊಹ್ಮದ್ ರಪೀ ಅವರ ಪತ್ನಿ ಮೊಹ್ಸಿನಾ ಹಾಗೂ ಮಲಪ್ಪುರಂ ಮುಂಡಿಯಂಕಾವ್ ನ ಇಶಾನ್ ಮತ್ತು ಫಾತಿಮಾ ರೂಬಿ ದಂಪತಿಯ ಪುತ್ರಿ ಸೈಷಾ ಮೃತರು ಎಂದು ಗುರುತಿಸಲಾಗಿದೆ.

ರಿಯಾದ್ ನ ಅಲ್ ಕಾಸಿರ ಎಂಬಲ್ಲಿ ಘಟನೆ ನಡೆದಿದೆ.ಕಾರಿನಲ್ಲಿ ತೆರಳುವಾಗ ಕಾರು ಪಲ್ಟಿಯಾಗಿ ದುರ್ಘಟನೆ ಸಂಭವಿಸಿದೆ.ರಿಯಾದ್ ನಿಂದ 350 ಕಿ.ಮಿ ದೂರದಲ್ಲಿ ಘಟನೆ ಸಂಭವಿಸಿದೆ.

ಮೃತದೇಹವನ್ನು ಆಸ್ಪತ್ರೆಯಲ್ಲಿರಿಸಲಾಗಿದೆ. ಮೃತರ ಭಾರತೀಯ ಕುಟುಂಬವನ್ನು ಸಂಪರ್ಕಿಸಲು ಯತ್ನ ನಡೆದಿದೆ.ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...