Breaking News

ನಾಲ್ಕು ಗ್ಯಾರಂಟಿಗಳ ಜೊತೆ ಐದನೇ ಗ್ಯಾರಂಟಿ ಮಹಿಳೆಯರಿಗೆ ಘೋಷಿಸಿದ ರಾಹುಲ್ ಗಾಂಧಿ

ಮಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕಕದ ಎಲ್ಲಾ ಮಹಿಳೆಯರಿಗೆ ತಮ್ಮ ಚುನಾಯಿತ ಸರಕಾರ ಬಂದ ತಕ್ಷಣ ಮೊದಲ ಕ್ಯಾಬಿನೆಟ್ ಮಿಟಿಂಗ್ ನಲ್ಲಿ ಈಗಾಗಲೇ ಘೊಷಿತ 4 ಗ್ಯಾರಂಟಿಗಳ ಜೊತೆ 5ನೇ ಗ್ಯಾರಂಟಿಯಾಗಿ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆಯನ್ನು ಕ್ರಮ ಕೈಗೊಳ್ಳಲಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದ್ದಾರೆ. ಅವರು ಮಂಗಳೂರು ಸಹ್ಯಾದ್ರಿಯ ತೆರೆದ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಸೇರಿದ ಕಾಂಗ್ರೆಸ್ ಸಭೆಯಲ್ಲಿ ನುಡಿದರು. ಈಗಾಗಲೆ ಕರ್ನಾಟಕ ಕಾಂಗ್ರೆಸ್ ಉಚಿತ 200 ಯುನಿಟ್  ವಿದ್ಯುತ್, ಪ್ರತಿ ಮನೆ ಸದಸ್ಯರಿಗೆ 10ಕೆಜಿ ಅಕ್ಕಿ, ಎರಡು ಸಾವಿರ ಮತ್ತು ಒಂದುವರೆ ಸಾವಿರ ರೂಪಾಯಿ ನಿರುದ್ಯೋಗ ಭತ್ತೆ, ಉದ್ಯೋಗ ಗ್ಯಾರಂಟಿಗಳನ್ನು ನೀಡಿದೆ.

ಭೃಷ್ಟಾಚರಾದ ಪ್ರಶ್ನೆ ಕೇಳಿದ್ದಾಕ್ಕೆ‌ ತನ್ನ ಲೋಕಸಭಾ ಸದಸ್ಯತ್ವವನ್ನು ಕಿತ್ತುಕೊಂಡರು ಎಂದು ವಿಷಾಧಿಸುತ್ತರಾಜ್ಯ ದಲ್ಲಿ ಭ್ರಷ್ಟಾಚರದ ಮೂಲಕ ಶಾಸಕರನ್ನು ಖರೀದಿಸಿ ಬಿಜೆಪಿ ಸರಕಾರ ರಚಿಸಿದೆ ಭ್ರಷ್ಟಾಚಾರದ ಮೂಲಕ ಅಧಿಕಾರ ಪಡೆದ ಬಿಜೆಪಿ ಕರ್ನಾಟಕದ ಜನರು    ಬರುವ ಚುನಾವಣೆಯಲ್ಲಿ ತಮ್ಮ ಗ್ಯಾರಂಟಿ ಸರಕಾರ ಅಧಿಕಾರಕ್ಕೆ ತರಲು ವಿನಂತಿಸಿದರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...