Breaking News

ಬಿಜೆಪಿಯವರು ಧರ್ಮ ಮತ್ತು ಮೋದಿಯ ಹೆಸರಲ್ಲಿ ಚುನಾವಣೆ ಗೆಲ್ಲುವ ಕನಸಲ್ಲಿದ್ದಾರೆ – ಶಾಸಕ ಪ್ರಿಯಾಂಕ್ ಖರ್ಗೆ

ಕಲಬುರಗಿ:ಬಿಜೆಪಿಯವರು ಧರ್ಮ ಮತ್ತು ಮೋದಿಯ ಹೆಸರಲ್ಲಿ ಚುನಾವಣೆ ಗೆಲ್ಲುವ ಕನಸಲ್ಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡನ ಮೇಲೆ 40 ಕೇಸು ಹಾಕಿದ್ದು ಬಿಜೆಪಿ ಸರ್ಕಾರ. ಅವನನ್ನು ಬಿಜೆಪಿ ಸರ್ಕಾರವೇ ಗಡಿಪಾರು ಮಾಡಿದ್ದು. ಈಗ ಅವನನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದೆ ಎಂದರು.

ಇನ್ನು ಮೋದಿ ಫೋಟೋ ತೋರಿಸಿ, ಧರ್ಮದ ಆಧಾರದ ಮೇಲೆ ಪ್ರಚಾರ ಮಾಡಿ ಹಾಗೂ ಸ್ವಲ್ಪ ಹಣ ಖರ್ಚು ಮಾಡಿದರೆ ಯಾರೂ ಬೇಕಾದರೂ ಚಿತ್ತಾಪುರದಲ್ಲಿ ಚುನಾವಣೆ ಗೆಲ್ಲಬಹುದು ಎಂದು ಬಿಜೆಪಿಗರು ತಿಳಿದಂತಿದೆ. ಅಸಮರ್ಥ ಅಭ್ಯರ್ಥಿ‌ಯನ್ನು ಸೋಲಿಸುವ ಮೂಲಕ ನೀವು ಕೇಂದ್ರ ಬಿಜೆಪಿಗರಿಗೆ ಸಂದೇಶ ರವಾನಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅಕ್ರಮ ಅಕ್ಕಿ‌ ಹಾಗೂ ಅಂಗನವಾಡಿಯಲ್ಲಿ ಮಕ್ಕಳಿಗೆ ಕೊಡುವ ಹಾಲಿನ ಪುಡಿಯನ್ನು ಕದ್ದು ಮಾಡಿ ಮಾರಾಟ ಮಾಡಿದಂತವರನ್ನು ನೀವು ಆಯ್ಕೆ ಮಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ನನಗೆ ಚಿತ್ತಾಪುರ ಕ್ಷೇತ್ರದ ಜನರ ಕುರಿತು ಕಾಳಜಿ ಇದೆ. ಕೊರೋನಾ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಿಂದ ಬೆಡ್ ಖರೀದಿಸಿ ತಂದು ಇಲ್ಲಿನ‌‌ ಜನರಿಗೆ ಒದಗಿಸಿದ್ದೇನೆ. ಅದಕ್ಕಾಗಿ‌ ನನ್ನ ಮೇಲೆ ಕೇಸ್ ದಾಖಲಾಗಿದೆ. ಆದರೆ ಮಣಿಕಂಠನ ಮೇಲೆ ಅಕ್ರಮ ಅಕ್ಕಿ ಸಾಗಾಣಿಕೆ ಮಾಡಿದ್ದಕ್ಕೆ ಕೇಸು ದಾಖಲಾಗಿವೆ. ನಿಮಗೆ ಜನಪರ ಕೆಲಸ ಮಾಡುವ ನಾನು ಬೇಕೋ? ಅಕ್ರಮ ಕೆಲಸದಲ್ಲಿ ತೊಡಗಿರುವ ಬಿಜೆಪಿ ಅಭ್ಯರ್ಥಿ ಬೇಕಾ? ನಿರ್ಧರಿಸಿ ಎಂದಿದ್ದಾರೆ.

About gaitonlennon_rodrigues

Check Also

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ..!

ಮಂಗಳೂರು: ‘ಡ್ರಗ್ಸ್ ಫ್ರಿ ಮಂಗಳೂರು’  ಅಭಿಯಾನದ ಅಂಗವಾಗಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು …

Leave a Reply

Your email address will not be published. Required fields are marked *

Translate »
error: Content is protected !!
Share to...