Breaking News

ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಬಹುಮತ ಪಡೆಯವುದು ನಿಶ್ಚಿತ- ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

ಮಂಗಳೂರು: ರಾಜಸ್ಥಾನದಲ್ಲಿ ಐನೂರು ರೂಪಾಯಿಗೆ ಸಿಲಿಂಡರ್ ನೀಡುತ್ತೇವೆ. ಬಡವರ ಖಾತೆಗೆ 50 ಸಾವಿರ ಹಣ ಹಾಕುತ್ತೇವೆ. ಮನುಷ್ಯರಿಗೆ 25 ಲಕ್ಷ ರೂ., ಗೋವುಗಳಿಗೆ 40 ಸಾವಿರದ ಉಚಿತ ವಿಮೆ ಮಾಡಿದ್ದೇವೆ. ಹೀಗಿದ್ದರೂ ಫ್ಯಾಸಿಸ್ಟ್ ಶಕ್ತಿಗಳು ಮಾತ್ರ ನಮ್ಮ ಸರ್ಕಾರವನ್ನು ಟೀಕಿಸುತ್ತವೆ. ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಬಹುಮತ ಪಡೆಯವುದು ನಿಶ್ಚಿತ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಬಿಜೆಪಿ ಸರಕಾರ ನೀಡಿದ ಭರವಸೆಗಳನ್ನು ಎಂದಿಗೂ ಈಡೇರಿಸಿಲ್ಲ. ಹೀಗಾಗಿ ಇದೀಗ ಇವರ ಭರವಸೆಗಳನ್ನು ಮತದಾರರು ನಂಬದ ಸ್ಥಿತಿಯಲ್ಲಿದ್ದಾರೆ ಎಂದರು. ರಾಜಸ್ಥಾನದಲ್ಲಿ 85 ಶೇಕಡಾ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಐದು ಬಜೆಟ್ ಮಂಡಿಸಿದ್ದು ಯಾವುದೇ ತೆರಿಗೆ ಹೆಚ್ಚಳ ಮಾಡಿಲ್ಲ. ಬಜೆಟ್ ಭರವಸೆಯನ್ನು 95 ಪರ್ಸೆಂಟ್ ಈಡೇರಿಸಿದ್ದೇವೆ. ಆದರೆ ಬಿಜೆಪಿಗರು ಏಕರೂಪ ನಾಗರಿಕ ಸಂಹಿತೆ ಮಾಡ್ತೀವಿ ಅಂತ ಜನರನ್ನು ಭ್ರಮೆಗೆ ತಳ್ಳುತ್ತಿದ್ದಾರೆ. ಸಿಎಎ ಕಾನೂನು ಮಾಡ್ತೇವೆಂದು ಹಿಂದೆ ಹೀಗೇ ನಾಟಕ ಮಾಡಿದ್ದರು. ನಿಮಗೆ ತಾಕತ್ತು ಇದ್ದರೆ ಇಡೀ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಿ. ನಿಮ್ಮ ಆಡಳಿತ ಇರುವ ರಾಜ್ಯಗಳಲ್ಲಿ ಈ ಕಾನೂನು ತನ್ನಿ. ಪ್ರತಿ ಬಾರಿ ಪ್ರಣಾಳಿಕೆಯಲ್ಲಿ ಮಾತ್ರ ಯಾಕೆ ಹೇಳಬೇಕು ಎಂದು ಬಿಜೆಪಿ ನಾಯಕರಿಗೆ ಅಶೋಕ್ ಗೆಹ್ಲೋಟ್ ಸವಾಲು ಹಾಕಿದರು. ಇಂದು ರಾಜ್ಯದಲ್ಲಿ ಕೃಷಿಕರು, ಕೂಲಿಕಾರ್ಮಿಕರು, ಉದ್ಯಮಿಗಳು, ಹೀಗೆ ಪ್ರತಿಯೊಂದು ರಂಗದವರೂ ದುಃಖದಲ್ಲಿದ್ದಾರೆ. ಅವರು ಸಂಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ ಎಂದು ದೂರಿದರು. ಧರ್ಮದ ಹೆಸರಿನಲ್ಲಿ, ಭಾವನೆಗಳ ಹೆಸರಿನಲ್ಲಿ ಮತದಾನಕ್ಕೆ ಸ್ಪರ್ಧಿಸುವುದು ಸರಿಯಲ್ಲ. ಬಿಜೆಪಿಗರು ಇದನ್ನೇ ಮಾಡಿಕೊಂಡು ಬಂದಿದ್ದು, ಅವರಲ್ಲಿ ಧೈರ್ಯ ಇದ್ದರೆ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿ ಎಂಧರು. ಇನ್ನು ಕರ್ನಾಟಕದಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಬಜರಂಗಬಲಿ, ರಾಮನ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದಾರೆ. ಇದನ್ನು ಮೊದಲು ಬಿಟ್ಟುಬಿಡಲಿ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ, ದೇವರ ಹೆಸರಲ್ಲಿ ಸಂಘಟನೆ ಕಟ್ಟಿ ಸ್ಚಾರ್ಥಕ್ಕೆ ಬಳಸಬಾರದು. ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡಿ ಎಂದರು. ಉಚಿತ ಭರವಸೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ ಬೆಲೆಯೇರಿಕೆ ಸಮಸ್ಯೆ ಎಲ್ಲ ಕಡೆ ಇದೆ, ಇದರಿಂದ ತಪ್ಪಿಸಲು ಈ ರೀತಿಯ ಸವಲತ್ತು ಕೊಡಬೇಕು. ಕೇರಳದಲ್ಲಿ ಎಡರಂಗ ಸರಕಾರ ಕೊಟ್ಟಿಲ್ಲವೇ ? ಎಂದರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...