Breaking News

ಹೊಸ ಕಾರು ಖರೀದಿಸಿದ ಸಂಭ್ರಮದಲ್ಲಿ ಎದುರಿದ್ದ ಬೈಕ್‌ಗೆ ಗುದ್ದಿದ ಮಹಿಳೆ, ಫುಡ್ ಡೆಲಿವರಿ ಬಾಯ್ ದುರ್ಮರಣ

ಹೈದರಾಬಾದ್: ಹೊಸ ಕಾರು ಖರೀದಿಸಿದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿ ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮ ಬೈಕ್‌ನಲ್ಲಿ ಸಾಗುತ್ತಿದ್ದ ಫುಡ್ ಡೆಲಿವರಿ ಏಜೆಂಟ್‌ ಬಲಿಯಾಗಿದ್ದಾನೆ.

ಹೈದರಾಬಾದ್‌ ಅಲ್ವಾಲ್‌ನ ಡೈರಿ ಫಾರ್ಮ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಾರ್ ಒಡತಿ ಸಾಫ್ಟ್‌ವೇರ್ ಇಂಜಿನಿಯರ್ ಶೀವಾಲಿ ಅಲ್ಲಾಡಿ ಎಂದು ಹೇಳಲಾಗಿದೆ. ನಗರದ ಕಣಜಿಗುಡಿ ನಿವಾಸಿಯಾದ ಆಕೆಯ ಕಾರು ಫುಡ್ ಡೆಲಿವರಿ ಏಜೆಂಟ್‌ನ ಬೈಕ್ ಹಾಗೂ ತಳ್ಳುವ ಗಾಡಿ ಸೇರಿದಂತೆ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಘಟನೆ ನಡೆದ ಬೆನ್ನಲ್ಲಿಯೇ ಆಕೆ ಸ್ಥಳದಿಂದ ಪರಾರಿಯಾಗಿದ್ದಾಳೆ. ಕಾರ್‌ನ ಮೇಲಿದ್ದ ತಾತ್ಕಾಲಿಕ ನೋಂದಣಿ ಸಂಖ್ಯೆಯಿಂದ ಪೊಲೀಸರು ಶಿವಾನಿಯನ್ನು ಪತ್ತೆ ಮಾಡಿದ್ದಾರೆ.

ಸಾವನ್ನಪ್ಪಿದ ವ್ಯಕ್ತಿಯನ್ನು 30 ವರ್ಷದ ರಸ್ತಾಪುರಂ ರಾಜು ಎಂದು ಪೊಲೀಸರು ಗುರುತಿಸಿದ್ದಾರೆ. ರಾಜು ಅವರಿಗೆ ಪತ್ನಿ ಮತ್ತು ಐದು ವರ್ಷದ ಮಗಳು ಮತ್ತು ಎರಡು ವರ್ಷದ ಮಗ ಇದ್ದಾರೆ. ಈ ಘಟನೆಯ ವೇಳೆ ಆಕೆ(ಶಿವಾನಿ) ಮದ್ಯ ಸೇವಿಸಿದ್ದಳು ಎಂದು ಕುಟುಂಬಸ್ಥರು ಶಂಕಿಸಿದ್ದು ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

About gaitonlennon_rodrigues

Check Also

BREAKING NEWS : ಹೊತ್ತಿ ಉರಿಯುತ್ತಿದೆ ಮಣಿಪುರ ; ಮ್ಯಾನ್ಮಾರ್ ಗಡಿ ಸಮೀಪದ ಮನೆ, ವಾಹನಗಳಿಗೆ ಬೆಂಕಿ

ಇಂಫಾಲ್ : ಮೇ 3ರಂದು ಮೀಟೆ-ಕುಕಿ ಘರ್ಷಣೆಗಳು ಪ್ರಾರಂಭವಾದಾಗಿನಿಂದ ಪಾಳು ಬಿದ್ದಿದ್ದ ಮ್ಯಾನ್ಮಾರ್ ಗಡಿಗೆ ಸಮೀಪದಲ್ಲಿರುವ ಮಣಿಪುರದ ಮೊರೆ ಬಜಾರ್ನ …

Leave a Reply

Your email address will not be published. Required fields are marked *

Translate »
error: Content is protected !!
Share to...