Breaking News

ಅಮೇರಿಕಾದಲ್ಲಿ ಮತ್ತೆ ಗುಂಡಿನ ದಾಳಿ: ಮಕ್ಕಳು ಸೇರಿ 9 ಮಂದಿ ಸಾವು, ಬಂದೂಕುಧಾರಿ ಹತ್ಯೆ

ಟೆಕ್ಸಾಸ್ :ಗುಂಡಿನ ದಾಳಿ ನಡೆದ ಪರಿಣಾಮ 9 ಮಂದಿ ಮೃತಪಟ್ಟಿರುವ ಘಟನೆ ಅಮೆರಿಕದ ಟೆಕ್ಸಾಸ್‌ ನಗರದಲ್ಲಿ ನಡೆದಿದೆ.

ಶನಿವಾರ ಬಂದೂಕುಧಾರಿ ವ್ಯಕ್ತಿಯೊಬ್ಬ ನಗರದ ಡಲ್ಲಾಸ್‌ನಲ್ಲಿರುವ ಮಾಲ್ ವೊಂದರಲ್ಲಿ ಅಲ್ಲಿದ್ದ ಜನರ ಮೇಲೆ ಮನಬಂದಂತೆ ಗುಂಡುಗಳನ್ನು ಹಾರಿಸಿದ ಪರಿಣಾಮ ನೂರಕ್ಕೂ ಅಧಿಕ ಮಂದಿ ಭೀತಿಯಿಂದ ಅತ್ತಿತ್ತ ಓಡಿದ್ದಾರೆ. ಟೆಕ್ಸಾಸ್‌ನಲ್ಲಿರುವ ಅಲೆನ್ ಪ್ರೀಮಿಯಂ ಔಟ್‌ಲೆಟ್‌ಗಳ ಮಾಲ್ ನಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರಿಗೆ ಕೂಡಲೇ ಮಾಹಿತಿ ಬಂದಿದ್ದು ಪೊಲೀಸರು ಬಂದೂಕುಧಾರಿ ವ್ಯಕ್ತಿಯನ್ನು ಶೂಟ್‌ ಮಾಡಿ ಹತ್ಯೆಗೈದಿದ್ದಾರೆ.

ಗುಂಡಿನ ದಾಳಿಯಿಂದ ಮೊದಲು 7 ಮಂದಿ ಮೃತಪಟ್ಟಿದ್ದು, ಆ ಬಳಿಕ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಹಾಗೂ ಮಗು ಸೇರಿದಂತೆ 9 ಮಂದಿ ಹತರಾಗಿದ್ದು, 7 ಮಂದಿಗೆ ಗಾಯಗಳಾಗಿವೆ ಎಂದು ನಗರ ಪೊಲೀಸ್ ಮುಖ್ಯಸ್ಥ ಬ್ರಿಯಾನ್ ಹಾರ್ವೆ ಹೇಳಿದ್ದಾರೆ.

ಅಮೆರಿಕಾದಲ್ಲಿ ಶೂಟೌಟ್‌ ಪ್ರಕರಣಗಳು ಸರ್ವೆಸಾಮಾನ್ಯದಂತೆ ನಡೆಯುತ್ತಿದೆ. 2023 ರಲ್ಲಿ ಇದುವರೆಗೆ 198 ಶೂಟೌಟ್‌ ಗಳು ನಡೆದಿದೆ.

About gaitonlennon_rodrigues

Check Also

ಕರಾಳ ಸತ್ಯ ಬಿಚ್ಚಿಟ್ಟ ಮಣಿಪುರ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ

ಇಂಫಾಲ: ಮೇ ತಿಂಗಳ ಆರಂಭದಲ್ಲಿ ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಹಿಂಸಾಚಾರ ಸಂಭವಿಸುತ್ತಿದ್ದಂತೆ, ಹಲವಾರು ಜನರು ತೊಂದರೆಗೊಳಗಾದ ಪ್ರದೇಶಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. …

Leave a Reply

Your email address will not be published. Required fields are marked *

Translate »
error: Content is protected !!
Share to...