Breaking News

ತಪ್ಪಿದ ದುರಂತ: ಐದು ಕೆಜಿ ಐಇಡಿ ಹೊಂದಿದ್ದ ಉಗ್ರನ ಬಂಧನ

ಶ್ರೀನಗರ : ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 5 ಕೆಜಿ ಸುಧಾರಿತ ಸ್ಫೋಟಕ ಸಾಧನದೊಂದಿಗೆ (ಐಇಡಿ) ಉಗ್ರನೊಬ್ಬನನ್ನು ಬಂಧಿಸಿ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕಾಶ್ಮೀರ ವಲಯ ಪೊಲೀಸರು, ಪುಲ್ವಾಮಾ ಪೊಲೀಸರು ಭಯೋತ್ಪಾದಕ ಸಹಚರ ಇಶ್ಫಾಕ್ ಅಹ್ಮದ್ ವಾನಿ ಅನ್ನು ಬಂಧಿಸುವ ಮತ್ತು ಐಇಡಿ (ಸುಮಾರು 5-6 ಕೆಜಿ) ವಶಪಡಿಸಿಕೊಳ್ಳುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

 

About gaitonlennon_rodrigues

Check Also

BREAKING NEWS : ಹೊತ್ತಿ ಉರಿಯುತ್ತಿದೆ ಮಣಿಪುರ ; ಮ್ಯಾನ್ಮಾರ್ ಗಡಿ ಸಮೀಪದ ಮನೆ, ವಾಹನಗಳಿಗೆ ಬೆಂಕಿ

ಇಂಫಾಲ್ : ಮೇ 3ರಂದು ಮೀಟೆ-ಕುಕಿ ಘರ್ಷಣೆಗಳು ಪ್ರಾರಂಭವಾದಾಗಿನಿಂದ ಪಾಳು ಬಿದ್ದಿದ್ದ ಮ್ಯಾನ್ಮಾರ್ ಗಡಿಗೆ ಸಮೀಪದಲ್ಲಿರುವ ಮಣಿಪುರದ ಮೊರೆ ಬಜಾರ್ನ …

Leave a Reply

Your email address will not be published. Required fields are marked *

Translate »
error: Content is protected !!
Share to...