Breaking News

ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ -ಇಬ್ಬರು ನಕ್ಸಲೀಯರ ಹತ್ಯೆ

ಛತ್ತೀಸ್‌ಗಢ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಭೇಜಿ ಪ್ರದೇಶದಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಯೋಧರು ಮತ್ತು ನಕ್ಸಲರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲೀಯರನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಸುಕ್ಮಾ ಪೊಲೀಸರು, ‘ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲೀಯರು ಹತರಾಗಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಶರ್ಮಾ ಅವರೇ ಸಂಪೂರ್ಣ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ’ ಎಂದರು.

ಇನ್ನು ಮೇ 1 ರಂದು ಸುಕ್ಮಾ ಜಿಲ್ಲೆಯ ಇಟ್ಟಪಾರಾ ಪ್ರದೇಶದಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಎರಡು ಟಿಪ್ಪರ್ ಟ್ರಕ್‌ಗಳಿಗೆ ನಕ್ಸಲರು ಬೆಂಕಿ ಹಚ್ಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

About gaitonlennon_rodrigues

Check Also

ದುಬೈನಲ್ಲಿ 45 ಕೋಟಿ ರು. ಮೊತ್ತದ ಬಂಪರ್‌ ಲಾಟರಿ ಗೆದ್ದ ಭಾರತೀಯ ಸಚಿನ್‌

ದುಬೈ: ಯುಎಇನಲ್ಲಿರುವ ಮುಂಬೈ ಮೂಲದ ಸಚಿನ್‌ (47) ಎಂಬುವವರು ಸ್ಥಳೀಯವಾಗಿ ಆಯೋಜಿಸುವ ಲಾಟರಿಯಲ್ಲಿ ಭರ್ಜರಿ 45 ಕೋಟಿ ರು. ಬಹುಮಾನ …

Leave a Reply

Your email address will not be published. Required fields are marked *

Translate »
error: Content is protected !!
Share to...