Breaking News

ಗೋಲ್ಡನ್ ಟೆಂಪಲ್ ಬಳಿ ಮತ್ತೊಂದು ಸ್ಫೋಟ ಪ್ರಕರಣ – ಐವರ ಬಂಧನ

ನವದೆಹಲಿ:ಅಮೃತಸರದ ಪಂಜಾಬ್‌ನ ಹೆರಿಟೇಜ್ ಸ್ಟ್ರೀಟ್ ಬಳಿ  ಮತ್ತೊಮ್ಮೆ ಸ್ಫೋಟ ಸಂಭವಿಸಿದ್ದು,ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ.

ಮುಂಜಾನೆ 1 ಗಂಟೆ ಸುಮಾರಿಗೆ ಅಮೃತಸರದ ಹೆರಿಟೇಜ್ ಸ್ಟ್ರೀಟ್ ಬಳಿ ಇಂದು  ಸ್ಫೋಟ ಸಂಭವಿಸಿದ್ದು, ಇದು ಐದು ದಿನಗಳಲ್ಲಿ ಸಂಭವಿಸಿದ ಮೂರನೇ ಸ್ಫೋಟ  ಇದಾಗಿದೆ.

ಅಮೃತ್ ಸರದ ಗೋಲ್ಡನ್ ಟೆಂಪಲ್ ಬಳಿ  ಮತ್ತೊಂದು  ಸ್ಫೋಟ ಸಂಭವಿಸಿದೆ, ಇದು ಐದು ದಿನಗಳಲ್ಲಿ ಸಂಭವಿಸಿದ ಮೂರನೇ ಸ್ಫೋಟ  ಇದಾಗಿದ್ದು, ಮುಂಜಾನೆ 1 ಗಂಟೆ ಸುಮಾರಿಗೆ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದು, ಘಟನೆಯು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಕಚ್ಚಾ ಬಾಂಬ್ ನಿಂದ ಜನರಿಗೆ ಆತಂಕಕ್ಕೀಡು ಮಾಡಿವೆ.

ಮೇ 6 ರಂದು ನಡೆದ ಮೊದಲ  ಮತ್ತು ಎರಡನೆಯ ಸ್ಫೋಟ  ಸೋಮವಾರ ಸಂಭವಿಸಿದ್ದು,ಇಂದು ಮುಂಜಾನೆ ನಡೆದ ಸ್ಫೋಟವು  ಪ್ರವಾಸಿ ತಾಣವಾದ ಗೋಲ್ಡನ್ ಟೆಂಪಲ್ ಬಳಿಯ ಹೆರಿಟೇಜ್ ಸ್ಟ್ರೀಟ್‌ನಿಂದ ಬಳಿ ನಡೆದಿತ್ತು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಳಾಗಿದ್ದಾನೆ. ಇದರಿಂದ ಕಟ್ಟಡಕ್ಕೆ ಹಾನಿಯಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಪಂಜಾಬ್ ಪೊಲೀಸರು ಸ್ಫೋಟದ ಸ್ಥಳದಿಂದ ಮಾಹಿತಿ ಸಂಗ್ರಹಿಸಿದ್ದು, ಅಲ್ಲದೇ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

About gaitonlennon_rodrigues

Check Also

BREAKING NEWS : ಹೊತ್ತಿ ಉರಿಯುತ್ತಿದೆ ಮಣಿಪುರ ; ಮ್ಯಾನ್ಮಾರ್ ಗಡಿ ಸಮೀಪದ ಮನೆ, ವಾಹನಗಳಿಗೆ ಬೆಂಕಿ

ಇಂಫಾಲ್ : ಮೇ 3ರಂದು ಮೀಟೆ-ಕುಕಿ ಘರ್ಷಣೆಗಳು ಪ್ರಾರಂಭವಾದಾಗಿನಿಂದ ಪಾಳು ಬಿದ್ದಿದ್ದ ಮ್ಯಾನ್ಮಾರ್ ಗಡಿಗೆ ಸಮೀಪದಲ್ಲಿರುವ ಮಣಿಪುರದ ಮೊರೆ ಬಜಾರ್ನ …

Leave a Reply

Your email address will not be published. Required fields are marked *

Translate »
error: Content is protected !!
Share to...