Breaking News

BREAKING NEWS: ಇಟಲಿಯ ಮಿಲನ್ ನಲ್ಲಿ ಭೀಕರ ಸ್ಫೋಟ: ಹಲವು ವಾಹನಗಳಿಗೆ ಬೆಂಕಿ

ಉತ್ತರ ಇಟಲಿಯ ಮಿಲನ್ ನ ಮಧ್ಯಭಾಗದಲ್ಲಿ ಸ್ಫೋಟದ ನಂತರ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ಸ್ಕೈಟಿಜಿ 24 ಸುದ್ದಿ ಚಾನೆಲ್ ಗುರುವಾರ ವರದಿ ಮಾಡಿದೆ.

ಈ ಕುರಿತಂತೆ ಸ್ಳಳೀಯ ಪೊಲೀಸರು ಮಾಹಿತಿ ನೀಡಿದ್ದು, ಇಟಲಿಯ ಮಿಲನ್ ನಲ್ಲಿ ಉಂಟಾದಂತ ಸ್ಪೋಟದಿಂದ ಅಕ್ಕ ಪಕ್ಕದ ವಾಹನಗಳಿಗೆ ಬೆಂಕಿ ತಗುಲಿದೆ.

ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ನಿರತರಾಗಿದ್ದಾರೆ ಎಂಬುದಾಗಿ ಹೇಳಿದ್ದಾರೆ.

ಇದಲ್ಲದೇ ಮಿಲನ್ ಮಧ್ಯಭಾಗದಲ್ಲಿನ ಸ್ಪೋಟಕ ಸ್ಥಳದಲ್ಲಿದ್ದಂತ ವ್ಯಾನ್ ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಅಂದಹಾಗೇ ಸ್ಕೈಟಿಜಿ 24 ಸುದ್ದಿ ಸಂಸ್ಥೆ ಪ್ರಸಾರ ಮಾಡಿದಂತ ವೀಡಿಯೋದಲ್ಲಿ ಮಿಲನ್ ನ ಪೋರ್ಟಾ ರೊಮಾನಾ ನೆರೆಹೊರೆಯ ತುಣುಕನ್ನು ಕಂಡು ಬಂದವು. ಘಟನಾ ಸ್ಥಳದಲ್ಲಿ ಹೆಚ್ಚಿನ ಕಪ್ಪು ಹೊಗೆ ಆವರಿಸಿದ್ದು, ವಾಹನಗಳಿಗೆ ತಗುಲಿದಂತ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ನಿರತರಾಗಿದ್ದು ಕಂಡು ಬಂದಿತು. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...