Breaking News

ಚುನಾವಣಾ ಫಲಿತಾಂಶಕ್ಕೂ ಮೊದಲೇ ಶಾಸಕರ ನಾಮಫಲಕ ತಂದ ಜೆಡಿಎಸ್ ಅಭ್ಯರ್ಥಿ!

ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆ ಒಂದು ದಿನದ ಹಿಂದಷ್ಟೇ ಮುಕ್ತಾಯವಾಗಿದ್ದು, ಇಡೀ ರಾಜ್ಯ ನಾಳಿನ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ. ಇದರ ನಡುವೆ ಜೆಡಿಎಸ್​ ಅಭ್ಯರ್ಥಿಯೊಬ್ಬರು ಫಲಿತಾಂಶಕ್ಕೂ ಮುನ್ನವೇ ಶಾಸಕರ ನಾಮಫಲಕವನ್ನು ತಂದಿಟ್ಟುಕೊಂಡಿದ್ದಾರೆ.

ತುಮಕೂರು ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರು ಫಲಿತಾಂಶಕ್ಕೂ ಮುನ್ನವೇ ಶಾಸಕರ ನಾಮಫಲಕ ತಂದಿಟ್ಟುಕೊಂಡಿದ್ದಾರೆ. ಎರಡು ಬಾರಿ ಸ್ಪರ್ಧೆ ಮಾಡಿ ಸೋಲು ಕಂಡಿದ್ದ ಗೋವಿಂದರಾಜು, ಈ ಬಾರಿ ಶತಯಗತಾಯ ನಾನೇ ಗೆಲ್ಲೋದು ಎಂಬ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಚುನಾವಣಾ ಫಲಿತಾಂಶಕ್ಕೂ ಮೊದಲೇ‌ ಶಾಸಕ ನಾಮಫಲಕ ತಂದಿದ್ದಾರೆ.

ಗೋವಿಂದರಾಜು ಅವರು ತಮ್ಮ ಕಾರ್ಯಕರ್ತರ ಜತೆ ನಾಮಫಲಕ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

 

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...