Breaking News

ವಿಧಾನಸೌಧದ ಎದುರೇ ‘ಯುವತಿ ಕಿಡ್ನಾಪ್’ಗೆ ಯತ್ನ: ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ವಿಧಾನ ಸೌಧದ ಎದುರಿನ ಮೆಟ್ರೋ ನಿಲ್ದಾಣದ ಬಳಿಯಲ್ಲೇ, ಯುವತಿಯೊಬ್ಬಳನ್ನು ಕಾರಿನಲ್ಲಿ ಅಪಹರಿಸಲು ಯತ್ನಿಸಿರುವಂತ ಘಟನೆ ನಡೆದಿದೆ. ಆದರೇ ಸ್ಥಳದಲ್ಲಿದ್ದಂತ ಕೆ ಎಸ್ ಐ ಎಸ್ ಎಫ್ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ರಕ್ಷಣೆ ಮಾಡಲಾಗಿದೆ.

ಜೊತೆಗೆ ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು, ಕೆಲಸ ಮುಗಿಸಿ ಮನೆಗೆ ಹೊರಟು, ವಿಧಾನಸೌಧದ ಮೆಟ್ರೋ ಸ್ಟೇಷನ್ ಬಳಿಗೆ ಬಂದಿದ್ದರು. ಈ ವೇಳೆ ಕಾರಿನಲ್ಲಿ ಬಂದಂತ ಇಬ್ಬರು ದುಷ್ಕರ್ಮಿಗಳು ಯುವತಿಯನ್ನು ಕಾರಿನೊಳಗೆ ಎಳೆದುಕೊಳ್ಳಲು ಯತ್ನಿಸಿದ್ದಾರೆ. ಆಗ ಯುವತಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ.

ಯುವತಿಯ ಕೂಗಾಟ ಕೇಳಿದಂತ ವಿಧಾನಸೌಧದ ಮೆಟ್ರೋ ನಿಲ್ದಾಣದ ಬಳಿಯಲ್ಲಿದ್ದಂತ ಕರ್ನಾಟಕ ಸ್ಟೇಟ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಪೋರ್ಸ್ ಸಿಬ್ಬಂದಿಗಳು, ಯುವತಿಯನ್ನು ರಕ್ಷಿಸಿದ್ದಾರೆ. ಅಲ್ಲದೇ ಯುವತಿಯನ್ನು ಕಾರಿನಲ್ಲಿ ಅಪಹರಿಸಲು ಯತ್ನಿಸಿದಂತ ಇಬ್ಬರು ಆರೋಪಿಗಳನ್ನು ಹಿಡಿದಿದ್ದಾರೆ.

ಇಬ್ಬರು ಆರೋಪಿಗಳನ್ನು ವಿಧಾನಸೌಧ ಪೊಲೀಸ್ ಠಾಣೆಗೆ ಒಪ್ಪಿಸಿದದು, ಯುವತಿ. ಸಂಬಂಧಿಕರಿಂದಲೇ ಕಿಡ್ನಾಪ್ ಮಾಡುವ ಪ್ರಯತ್ನ ನಡೆದಿರುವಂತ ಶಂಕೆ ವ್ಯಕ್ತವಾಗಿದೆ. ಅಲ್ಲದೇ ತಂದಿಯ ನಿಧನಾನಂತರ ಮಗಳಿಗೆ ಕೆಲಸ ಬಂದಿದ್ದರಿಂದ, ಸಂಬಂಧಿಕರೊಂದಿಗೆ ಮನಸ್ತಾಪ ಉಂಟಾಗಿ ಅಪಹರಣದ ಯತ್ನ ನಡೆದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆಯ ನಂತ್ರ ತಿಳಿದು ಬರಬೇಕಿದೆ.

About gaitonlennon_rodrigues

Check Also

ಗೃಹಲಕ್ಷ್ಮೀ ಯೋಜನೆಯ ನಕಲಿ ಸರ್ಟಿಫಿಕೇಟ್ ಹಂಚುತ್ತಿದ್ದ ಸೈಬರ್ ಸೆಂಟರ್ ಮಾಲೀಕ ಅರೆಸ್ಟ್..!

ಮೈಸೂರು: ಮೈಸೂರಿನಲ್ಲಿ ಗೃಹಲಕ್ಷಿ ಯೋಜನೆ ನಕಲಿ ಸರ್ಟಿಫಿಕೇಟ್ ಸಿದ್ದಪಡಿಸುತ್ತಿದ್ದ ಸೈಬರ್ ಸೆಂಟರ್ ಮಾಲೀಕನೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಸುರೇಶ್ ಕುಮಾರ್ ಎಂದು …

Leave a Reply

Your email address will not be published. Required fields are marked *

Translate »
error: Content is protected !!
Share to...