Breaking News

ನಾಳೆಯಿಂದ ದೇಶಾದ್ಯಂತ ’75 ರೂಪಾಯಿ ನಾಣ್ಯ’ ಚಲಾವಣೆ

ವದೆಹಲಿ : ಭಾನುವಾರ ಅಂದ್ರೆ ನಾಳೆ 75 ರೂಪಾಯಿ ಮುಖಬೆಲೆಯ ನಾಣ್ಯವನ್ನ ದೇಶಾದ್ಯಂತ ಬಿಡುಗಡೆ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸುವ ಗೌರವ ಸೂಚಕವಾಗಿ ಹೊಸ ನಾಣ್ಯವನ್ನ ಸರ್ಕಾರ ಬಿಡುಗಡೆ ಮಾಡಲಿದೆ.

ಅದ್ರಂತೆ, ಈ ಕುರಿತು ಆರ್ಥಿಕ ವ್ಯವಹಾರಗಳ ಇಲಾಖೆ ಅಧಿಕೃತ ಗೆಜೆಟ್ ಹೊರಡಿಸಿದೆ.

ಈ ಹೊಸ ನಾಣ್ಯದ ತೂಕ ಸುಮಾರು 35 ಗ್ರಾಂ ಆಗಿದ್ದು, ನಾಣ್ಯದಲ್ಲಿ ಅಶೋಕ ಚಕ್ರ ಸಿಂಹವಿದೆ, ಮಧ್ಯದಲ್ಲಿ ದೇವನಾಗರಿ ಲಿಪಿಯಲ್ಲಿ ಭರತ್ ಹೆಸರು ಮತ್ತು ಇಂಗ್ಲಿಷ್ನಲ್ಲಿ ಇಂಡಿಯಾ ಪದ ಬರೆಯಲಾಗಿದೆ. ಇನ್ನು ರೂಪಾಯಿ ಚಿಹ್ನೆ ಮತ್ತು ಈ ನಾಣ್ಯದ ವಿನಿಮಯ ಮೌಲ್ಯವು 75 ರೂಪಾಯಿ. ಇನ್ನೊಂದು ಬದಿಯಲ್ಲಿ ಹೊಸ ಸಂಸತ್ ಭವನದ ಆವರಣದ ಪ್ರತಿಮೆ ಇದ್ದು, ಕೆಳಭಾಗದಲ್ಲಿ 2023 ಎನ್ನುವ ಅಂಕಿಯಿದೆ. ಇನ್ನು ಈ 75 ರೂಪಾಯಿ ನಾಣ್ಯವು ದೇಶದ ಸ್ವಾತಂತ್ರ್ಯದ ಸಂಕೇತವಾಗಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...