Breaking News

ಬಂಟ್ವಾಳ: ಅಪರಿಚಿತ ವ್ಯಕ್ತಿಯೊಬ್ಬರ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ..!

ಬಂಟ್ವಾಳ: ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಬಂಟ್ವಾಳ ತಾಲೂಕಿನ ನರಿಕೊಂಬುವಿನಲ್ಲಿ ಪತ್ತೆಯಾಗಿದೆ. 40ರಿಂದ 50ರ ವಯಸ್ಸಿನ ಗಂಡಸ್ಸಿನ ಮೃತದೇಹ ಎಂದು ಗುರುತಿಸಲಾಗಿದೆ.

ಇಲ್ಲಿನ ಗುಡ್ಡದ ಪಕ್ಕದ ಜಮೀನಿನ ವ್ಯಕ್ತಿಯೊಬ್ಬರು ತೋಟಕ್ಕೆ ನೀರು ಬಿಡಲು ಹೋದ ವೇಳೆ ಗುಡ್ಡೆಯಲ್ಲಿ ವಾಸನೆ ಬರುತ್ತಿದೆ ಎಂದು ಹೋಗಿ ನೋಡಿದಾಗ ಮರದಲ್ಲಿ ಒಬ್ಬರ ಮೃತದೇಹ ನೇತಾಡುತ್ತಿರುವುದು ಗಮನಕ್ಕೆ ಬಂದಿದೆ. ಆ ಕೂಡಲೇ ಅವರು ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಮೃತದೇಹ ಕೊಲೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮುಖದ ಗುರುತು ಪತ್ತೆ ಹಚ್ಚಲು ಕಷ್ಟವಾಗಿದೆ. ಅಂದಾಜಾಗಿ ಹದಿಹರೆಯದ ವ್ಯಕ್ತಿಯ ದೇಹವನ್ನು ಹೋಲುತ್ತಿದ್ದು, ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿದ್ದಾನೆ ಎಂದು ಹೇಳಿದ್ದಾರೆ. ಸದ್ಯಕ್ಕೆ ತಾಲೂಕಿನ ಠಾಣೆಗಳಲ್ಲಿ ಯಾವುದೇ ಕಾಣೆಯಾದ ಪ್ರಕರಣ ದಾಖಲಾಗಿರುವುದು ಕಂಡುಬಂದಿಲ್ಲವಾದ ಕಾರಣ ಆತ ತಾಲೂಕಿನ ವ್ಯಕ್ತಿಯಾ ಅಥಾವ ಬೇರೆ ತಾಲೂಕಿ ವ್ಯಕ್ತಿಯ ಎಂದು ಸಂಶಯ ವ್ಯಕ್ತವಾಗಿದೆ. ಇದು ಆತ್ಮಹತ್ಯೆ ಪ್ರಕರಣ ಅಥಾವ ಇನ್ನು ಬೇರೆ ಕಾರಣಗಳಿರಬಹುದಾ ? ಎಂದು ಪೊಲೀಸರು ಹೇಳಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಬಹುದು ಎಂದಿದ್ದಾರೆ. ಅಪರಿಚಿತ ಶವವನ್ನು ಗುರುತು ಪತ್ತೆ ಹಚ್ಚಲು ಕೋರಿದ ಅವರು ಮೃತದೇಹವನ್ಹು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂಟ್ವಾಳ ‌ನಗರ ಠಾಣಾ ಎಸ್. ಐ.ರಾಮಕೃಷ್ಣ ಅವರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದರೆ. ಇದೀಗ ತನಿಖೆ ಮುಂದುವರಿದಿದೆ ಎನ್ನಲಾಗಿದೆ.

About gaitonlennon_rodrigues

Check Also

ಉಡುಪಿ: ಕಾಲೇಜು ಶೌಚಾಲಯ ಚಿತ್ರೀಕರಣ – ಸಂತ್ರಸ್ತೆಯ ಹೇಳಿಕೆ ಪಡೆದ ನ್ಯಾಯಾಲಯ

ಉಡುಪಿ: ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಖಾಸಗಿ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಮುಂದುವರಿದಿದ್ದು, ಪ್ರಕರಣದ ಸಂತ್ರಸ್ತ ವಿದ್ಯಾರ್ಥಿನಿಯಿಂದ ನ್ಯಾಯಾಲಯವು …

Leave a Reply

Your email address will not be published. Required fields are marked *

Translate »
error: Content is protected !!
Share to...