Breaking News

ಕೊಲ್ಲಂ-ಚೆನ್ನೈ ಎಕ್ಸ್‌ಪ್ರೆಸ್ ರೈಲು ಕೋಚ್‌ನಲ್ಲಿ ಬಿರುಕು; ತಪ್ಪಿದ ಭಾರೀ ಅನಾಹುತ

ಕೊಲ್ಲಂ: ಕೊಲ್ಲಂ-ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್‌ನ ಬೋಗಿಯೊಂದರಲ್ಲಿ ಬಿರುಕು ಬಿಟ್ಟಿರುವುದನ್ನು ರೈಲ್ವೆ ಅಧಿಕಾರಿಗಳು ಭಾನುವಾರ ಗುರುತಿಸಿದ್ದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ. ರೈಲು ಸೆಂಗೋಟ್ಟೈ ರೈಲು ನಿಲ್ದಾಣಕ್ಕೆ ಬಂದಾಗ ಬಿರುಕು ಬಿಟ್ಟಿದ್ದನ್ನು ಅಧಿಕಾರಿಗಳು ಗಮನಿಸಿದ್ದಾರೆ.

 

ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದಾಗ ಬಿರುಕು ಕಾಣಿಸಿಕೊಂಡಿದೆ. ರೈಲ್ವೆ ಸಿಬ್ಬಂದಿ ಎಸ್-3 ಕೋಚ್‌ನ ಚಕ್ರಗಳ ಮೇಲಿನ ಚಾಸಿಸ್ ಅಡಿಯಲ್ಲಿ ದೊಡ್ಡ ಬಿರುಕು ಪತ್ತೆ ಮಾಡಿದ್ದಾರೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡರು.

ಅಧಿಕಾರಿಗಳು ಪ್ರಯಾಣಿಕರನ್ನು ಇತರ ಬೋಗಿಗಳಿಗೆ ಸ್ಥಳಾಂತರಿಸಿದ ನಂತರ ರೈಲು ಪ್ರಯಾಣವನ್ನು ಪುನರಾರಂಭಿಸಿತು ಮತ್ತು ಹಾನಿಗೊಳಗಾದ ಬೋಗಿಯನ್ನು ಬೇರ್ಪಡಿಸಲಾಯಿತು. ರೈಲು ಮಧುರೈ ತಲುಪಿದಾಗ ಪ್ರತ್ಯೇಕ ಕೋಚ್ ಸೇರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...