Breaking News

ಮಂಗಳೂರು: ಮಟ್ಕಾ ದಾಳಿ 25 ಆರೋಪಿಗಳು ಅರೆಸ್ಟ್

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್‌ನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಟ್ಕಾ ದಾಳಿಯಲ್ಲಿ 25 ಮಂದಿಯನ್ನು ಬಂಧಿಸಲಾಗಿದೆ. ನಗರದ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದ ದಾಳಿಯಲ್ಲಿ ಶ್ರೀನಿವಾಸ, ಅಶೋಕ್ ಕುಮಾರ್, ಹರೀಶ್ ಪೂಜಾರಿ, ಮಹಮ್ಮದ್ ಇಸ್ಮಾಯಿಲ್, ಪುನೀತ್ ರಾವ್, ನಿರೀಕ್ಷಿತ್, ಪ್ರದೀಪ್ ಕೆ, ಶರವಣ್ ಕುಮಾರ್, ಪ್ರದೀಪ್ ಸಾಲ್ಯಾನ್, ದೇವರಾಜ್ ಶೆಟ್ಟಿ, ಚರಣ್ ಕುಮಾರ್, ಹುಸೇನ್ ಉಮರ್, ಸದಾಶಿವ, ಜಯಂತ್, ಗಣೇಶ್ ಎಂ, ಮಹಮ್ಮದ್ ಶರೀಫ್, ವಿಜಿತ್, ಕೀರ್ತಿ, ಧೀರಜ್ ಸೇರಿದಂತೆ ಒಟ್ಟು 19 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಅಲ್ಲದೆ 13,010 ರೂ. ನಗದು ಮತ್ತು ಇನ್ನಿತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯಲ್ಲಿ ನಡೆದ ದಾಳಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿದೆ. ಈ ಪ್ರಕರಣದಲ್ಲಿ ಸಜಿತ್, ಚೇತನ್ ಕುಮಾರ್‌ ಮತ್ತು ಶರತ್ ರಾಜ್ ಎಂಬ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಈ ವೇಳೆ ಪೊಲೀಸರು 3,890 ರೂ. ನಗದು ಮತ್ತು ಇನ್ನಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಟ್ಕಾ ದಾಳಿಯಲ್ಲಿ ಪೊಲೀಸರು ಮೋಹನ್, ಆಸಿಫ್ ಮತ್ತು ಮಹಮದ್ ಮುಸ್ತಾಫಾ ಎಂಬ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 1,270 ರೂ. ಮೊತ್ತದ ನಗದು ಮತ್ತು ಇನ್ನಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮಟ್ಕಾ ದಾಳಿಯ ಹಿನ್ನೆಲೆಯಲ್ಲಿ ಒಟ್ಟು 5 ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು 25 ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಒಟ್ಟು 18,170 ರೂ. ನಗದು ವಶಪಡಿಸಿಕೊಂಡಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...