Breaking News

ಜನರ ಬದುಕನ್ನು ಗಟ್ಟಿಗೊಳಿಸುವ ಯೋಜನೆಗಳನ್ನು ರೂಪಿಸಲು ಹಿಂದೇಟು ಹಾಕುವುದಿಲ್ಲ – ಕಾಂಗ್ರೆಸ್

ಬೆಂಗಳೂರು: ಕಾಂಗ್ರೆಸ್ ಜಾರಿಗೊಳಿಸಿರುವಂತ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರು ದಿನಕ್ಕೊಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ಕರ್ನಾಟಕ ಆರ್ಥಿಕವಾಗಿ ದಿವಾಳಿ ಆಗಲಿದೆ ಎಂಬುದಾಗಿಯೂ ವಾಗ್ಧಾಳಿ ನಡೆಸುತ್ತಿದ್ದಾರೆ. ಇದಕ್ಕೆ ಟಾಂಗ್ ನೀಡಿರುವಂತ ಕಾಂಗ್ರೆಸ್, ಜನರ ಬದುಕನ್ನು ಗಟ್ಟಿಗೊಳಿಸುವ ಯೋಜನೆಗಳನ್ನು ರೂಪಿಸಲು ಹಿಂದೇಟು ಹಾಕುವುದಿಲ್ಲ ಎಂದಿದೆ.

 

ಈ ಕುರಿತಂತೆ ಟ್ವಿಟ್ ಮಾಡಿದ್ದು, ಬಿಜೆಪಿ ಸೃಷ್ಟಿಸಿದ ನಿರುದ್ಯೋಗ ಪರ್ವದಲ್ಲಿ ಗ್ರಾಮೀಣ ಜನರಿಗೆ ಆಸರೆಯಾಗಿದ್ದು ಕಾಂಗ್ರೆಸ್ ರೂಪಿಸಿದ ಉದ್ಯೋಗ ಖಾತ್ರಿ ಯೋಜನೆ. ನರೇಗಾ ಯೋಜನೆ ರೂಪಿಸಿದಾಗಲೂ ಇದೇ ಬಿಜೆಪಿ ‘ದೇಶ ದಿವಾಳಿಯಾಗುತ್ತದೆ’ ಎಂದು ಬಾಯಿ ಬಡಿದುಕೊಂಡಿತ್ತು, ಆದರೆ ಇಂದು ಮಹತ್ತರ ಯೋಜನೆಯಾಗಿ ನಿಂತಿದೆ. ಜನರ ಬದುಕನ್ನು ಗಟ್ಟಿಗೊಳಿಸುವ ಯೋಜನೆಗಳನ್ನು ರೂಪಿಸಲು ಕಾಂಗ್ರೆಸ್ ಹಿಂದೇಟು ಹಾಕುವುದಿಲ್ಲ ಎಂದು ಹೇಳಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...