Breaking News

ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸ್ವೀಕಾರ ನಾಳೆಯಿಂದ ಆರಂಭ

ಬೆಂಗಳೂರು : ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ಜೂನ್ 18 ರಿಂದ ಆರಂಭವಾಗಲಿದ್ದು, ಗೃಹಲಕ್ಷ್ಮೀ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಸಬಹುದು.

ಗೃಹಜ್ಯೋತಿಯೋಜನೆಯ ಲಾಭ ಪಡೆಯಲಿಚ್ಚಿಸುವ ಫಲಾನುಭವಿಗಳು ವಿಶೇಷವಾಗಿ ಸೃಜಿಸಲಾಗಿರುವ ( Custom-made ) ಸೇವಾ ಸಿಂಧು ಪೋರ್ಟಲ್‌ನಲ್ಲಿ https://sevasindhugs.karnataka.gov.in/gruhajyothi ನೋಂದಾಯಿಸಬೇಕಾಗಿದೆ. ಸದರಿತಂತ್ರಾಂಶವನ್ನು ಮೊಬೈಲ್ ಫೋನ್ / ಕಂಪ್ಯೂಟರ್ /ಲ್ಯಾಪ್‌ಟ್ಯಾಪ್ ಗಳ ಮೂಲಕವೂ ಸಹ ಬಳಸಬಹುದಾಗಿದೆ.

ಫಲಾನುಭವಿಗಳು ಆಧಾರ್‌ಕಾರ್ಡ್, ವಿದ್ಯುತ್‌ಖಾತೆ ಸಂಖ್ಯೆಗಳಮಾಹಿತಿಗಳನ್ನು (ವಿದ್ಯುತ್ ಬಿಲ್‌ನಲ್ಲಿಇರುವಂತೆ) ನೋಂದಣಿ ಸಮಯದಲ್ಲಿ ನೀಡಬೇಕಾಗುತ್ತದೆ.ಬೆಂಗಳೂರು ಒನ್, ಗ್ರಾಮ್‌ಒನ್ ಮತ್ತುಕರ್ನಾಟಕಒನ್ ಕೇಂದ್ರಗಳಲ್ಲಿಅಥವಾಯಾವುದೇ ವಿದ್ಯುತ್ ಕಚೇರಿಗಳಲ್ಲಿಯೂ ಸಹ ನೋಂದಾಯಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ವಿದ್ಯುಚ್ಛಕ್ತಿಕಚೇರಿಯನ್ನು ಸಂಪರ್ಕಿಸಬಹುದುಅಥವಾ 24×7 ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆಮಾಡಬಹುದಾಗಿದೆ.

ಗೃಹಜ್ಯೋತಿಯೋಜನೆಯುರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯೋಜನೆಯಾಗಿದ್ದು, ಈ ಯೋಜನೆಯಡಿರಾಜ್ಯದಲ್ಲಿನಪ್ರತಿ ಮನೆಗೆ ಪ್ರತಿ ತಿಂಗಳಿಗೆಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆಅರ್ಹರಿರುತ್ತಾರೆ.

ಈ ಯೋಜನೆಯುರಾಜ್ಯದಲ್ಲಿ ಮೊದಲ ಬಾರಿಗೆ ಸಾರ್ವಜನಿಕಕಲ್ಯಾಣಕಾರ್ಯಕ್ರಮವಾಗಿದ್ದು, ಇದರಿಂದರಾಜ್ಯದ 2.14 ಕೋಟಿ ಗೃಹ ಬಳಕೆ ಗ್ರಾಹಕರಿಗೆ ಅನುಕೂಲವಾಗುತ್ತದೆ.ಈ ಯೋಜನೆಯು 2023ರ ಆಗಸ್ಟ್ 1 (ಜುಲೈ ಮಾಹೆಯ ವಿದ್ಯುಚ್ಛಕ್ತಿ ಬಳಕೆ) ರಿಂದಜಾರಿಗೆ ಬರಲಿದ್ದುಅರ್ಹತೆಯ ಮಿತಿಯಲ್ಲಿದ್ದ ಫಲಾನುಭವಿಗಳು ಆಗಸ್ಟ್ 1 ರಿಂದ ಶೂನ್ಯ ಬಿಲ್ಲನ್ನು ಪಡೆಯಲಿದ್ದಾರೆ.

ಗೃಹಲಕ್ಷ್ಮೀ ಯೋಜನೆ

ಪ್ರತಿ ತಿಂಗಳು ಮನೆಯೊಡತಿ ಖಾತೆಗೆ 2 ಸಾವಿರ ರೂ. ಹಣ ಹಾಕುವ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ದಿನಾಂಕ ಜೂ.15 ರ ಬದಲು ಜೂನ್ 16 ಕ್ಕೆ ಮುಂದೂಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಮಂಜುಳಾ ಜೂನ್ 15 ಕ್ಕೆ ಚಾಲನೆ ನೀಡಲು ಎಲ್ಲಾ ಸಿದ್ಧತೆ ಪೂರ್ಣಗೊಳಿಸಿದ್ದೇವೆ. ಆದರೆ ಅಧಿಕಾರಿಗಳು, ಸಿಬ್ಬಂದಿಗೆ ಯಾವುದೇ ಗೊಂದಲ ಆಗದಂತೆ ತರಬೇತಿ ನೀಡುವ ಸಲುವಾಗಿ ಒಂದು ದಿನ ಮುಂದೂಡಿದ್ದೇವೆ. ಜೂನ್ 16 ರ ನಾಳೆಯಿಂದ ಅರ್ಜಿ ಸಲ್ಲಿಸಬಹುದು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...