Breaking News

ಲಂಡನ್ ನಲ್ಲಿ ಕೊಲೆಯಾದ ಭಾರತೀಯ ಮೂಲದ ಯುವತಿ

ಲಂಡನ್: ಹೈದರಾಬಾದ್ ಮೂಲದ ವಿಧ್ಯಾರ್ಥಿನಿಯೊಬ್ಬಳನ್ನು ದುಷ್ಕರ್ಮಿಗಳು ಚಾಕುವಿನಿಂದ ಇರದು ಹತ್ಯೆ ಮಾಡಿದ ಘಟನೆ ಲಂಡನ್ ನಲ್ಲಿ ನಡೆದಿದೆ. ಕೊಲೆಯಾದ ವಿಧ್ಯಾರ್ಥಿನಿಯನ್ನು ಕೊಂತಂ ತೇಜಸ್ವಿನಿ (27) ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಲಂಡನ್‌ಗೆ ತೆರಳಿದ್ದ ಆಕೆ‌ ಎಂ.ಎಸ್ ಪೂರ್ಣಗೊಳಿಸಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಹೈದರಾಬಾದ್ ಗೆ ಬಂ‌ದಿದ್ದಳು. ಒಂದು ತಿಂಗಳ ಬಳಿಕ ಲಂಡನ್‌ಗೆ ತೆರಳಿದ್ದಳು. ಈ ವರ್ಷದ ಮೇ ತಿಂಗಳಲ್ಲಿ ವಾಪಸ್ ಬರಬೇಕಿತ್ತು’ ಎಂದು ತೇಜಸ್ವಿನಿ ಅವರ ತಂದೆ ‌ಹೇಳಿದರು. ‘ಲಂಡನ್‌ನಿಂದ ಮರಳಿದ ಬಳಿಕ ಈ ವರ್ಷ ವಿವಾಹ ಆಗುತ್ತೇನೆ ಎಂದಿದ್ದಳು. ತನ್ನ ಕೆಲಸಕ್ಕೂ ರಾಜೀನಾಮೆ ನೀಡಿದ್ದ ಆಕೆ, ಇನ್ನೊಂದು ತಿಂಗಳು ಕೆಲಸ ಮಾಡಿ ಬರುವುದಾಗಿ ಹೇಳಿದ್ದಳು’ ಎಂದು ತಿಳಿಸಿದರು.
ತೇಜಸ್ವಿನಿ ವಾಸವಿದ್ದ ನೀಲ್ಡ್ ಕ್ರೆಸೆಂಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಮಂಗಳವಾರ ಈ ಕೃತ್ಯ ನಡೆದಿದೆ. ಘಟನೆಯಲ್ಲಿ ಮತ್ತೊಬ್ಬ ಯುವತಿ ಸಹ ಇರಿತಕ್ಕೆ ಒಳಗಾಗಿದ್ದು, ಅವರನ್ನು ‌ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  23 ವರ್ಷದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ’ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...