Breaking News

ಪ್ರಧಾನಿ ಮೋದಿ ಮಾದರಿಯಲ್ಲೇ ಸಿಎಂ ಸಿದ್ದರಾಮಯ್ಯಗೂ ಸೆಂಗೋಲ್ ಪ್ರದಾನ; ರಾಜದಂಡದ ಮೇಲೆ ಪೆರಿಯಾರ್ ಭಾವಚಿತ್ರ.

ಬೆಂಗಳೂರು: ನೂತನ ರಾಜಭವನದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ, ಸೆಂಗೋಲ್​ಅನ್ನು ಸ್ಥಳಾಂತರಿಸಿದ್ದು ಭಾರಿ ಸುದ್ದಿಯನ್ನು ಮಾಡಿತ್ತು. ಇದರ ಬಗ್ಗೆ ಕೆಲ ವಿಪಕ್ಷಗಳಿಂದ ಭಾರಿ ವಿರೋಧವೂ ವ್ಯಕ್ತವಾಗಿತ್ತು. ಇದೀಗ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇಂದು ಸೆಂಗೋಲ್​ ಅನ್ನು ಸ್ವೀಕರಿಸಲಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಇಂದು ಸಾಮಾಜಿಕ ನ್ಯಾಯದ ಹಾಗೂ ಸೆಕ್ಯುಲರ್​ ಸೆಂಗೋಲ್​ಅನ್ನು ತಮಿಳುನಾಡು ಮೂಲದ ಸಂಘಟನೆಯೊಂದು ಪ್ರದಾನ ಮಾಡಲಿದೆ. ಇಂದು ಸಂಜೆ ಸೆಕ್ಯೂಲರ್ ಸೆಂಗೋಲ್ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಅಂದ ಹಾಗೆ ಈ ಸೆಕ್ಯೂಲರ್ ಸೆಂಗೋಲ್​ಅನ್ನು ನೀಡುತ್ತಿರುವುದು ತಮಿಳುನಾಡಿನ ಪೇರವೈ ಸಂಘಟನೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 6 ಗಂಟೆಗೆ ಸೆಂಗೋಲ್ ಪ್ರದಾನ ಕಾರ್ಯಕ್ರಮ ನಡೆಯಲಿದ್ದು ಅದರ ಮೇಲೆ ಪೆರಿಯಾರ್​ ಭಾವಚಿತ್ರ ಇರಲಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...