Breaking News

‘ಕೋವಿನ್ ಪೋರ್ಟಲ್’ನಲ್ಲಿ ಡೇಟಾ ಸೋರಿಕೆ, ಓರ್ವ ಅರೆಸ್ಟ್

ವದೆಹಲಿ : ಕೋವಿನ್ ಪೋರ್ಟಲ್ ಡೇಟಾ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ಘಟಕದ ಐಎಫ್‌ಎಸ್‌ಒ ಘಟಕವು ಬಿಹಾರ ಮೂಲದ ವ್ಯಕ್ತಿಯನ್ನ ಬಂಧಿಸಿದೆ.

ವರದಿಯ ಪ್ರಕಾರ, ಆರೋಪಿ ವ್ಯಕ್ತಿಯು ಈ ಡೇಟಾವನ್ನ ಟೆಲಿಗ್ರಾಮ್’ನಲ್ಲಿ ಹಂಚಿಕೊಂಡಿದ್ದಾನೆ.

ಆರೋಪಿಯ ತಾಯಿ ಬಿಹಾರದಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿದ್ದಾರೆ. ಇದರೊಂದಿಗೆ, ದೆಹಲಿ ಪೊಲೀಸರ ವಿಶೇಷ ಸೆಲ್ ಅಪ್ರಾಪ್ತ ವಯಸ್ಕನನ್ನ ಸಹ ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.

ಈ ತಿಂಗಳ ಆರಂಭದಲ್ಲಿ, ಕೇರಳ ಮೂಲದ ಮಾಧ್ಯಮ ಸಂಸ್ಥೆ ಆರೋಪಿಗಳು ಟೆಲಿಗ್ರಾಮ್’ನಲ್ಲಿ ಡೇಟಾವನ್ನ ಹಂಚಿಕೊಂಡಿದ್ದಾರೆ. ಇನ್ನು ಡೇಟಾ ಅಲ್ಲಿ ಲಭ್ಯವಿದೆ ಎಂದು ವರದಿ ಮಾಡಿತ್ತು. ಇದರ ನಂತ್ರ ಕೇಂದ್ರವು ಈ ವಿಷಯದಲ್ಲಿ ಸ್ಪಷ್ಟನೆ ನೀಡಿತ್ತು ಮತ್ತು ಇದನ್ನ ವದಂತಿ ಎಂದು ಕರೆದಿತ್ತು.

ಟೆಲಿಗ್ರಾಂನಲ್ಲಿ ಯಾರೊಬ್ಬರ ಮೊಬೈಲ್ ಸಂಖ್ಯೆಯನ್ನ ಸೇರಿಸಿದಾಗ, ಟೆಲಿಗ್ರಾಮ್ ಬಾಟ್ ಬಳಕೆದಾರರ ಐಡಿಯನ್ನ ಮುಂದೆ ತೋರಿಸುತ್ತದೆ. ಟೆಲಿಗ್ರಾಮ್ ವ್ಯಾಕ್ಸಿನೇಷನ್ ಸಮಯದಲ್ಲಿ ಹಂಚಿಕೊಂಡ ಐಡಿ ಕಾರ್ಡ್’ನ್ನ ಪ್ರದರ್ಶಿಸುತ್ತದೆ, ಇದರಲ್ಲಿ ಬಳಕೆದಾರರ ಹೆಸರು, ಹುಟ್ಟಿದ ದಿನಾಂಕ, ವ್ಯಾಕ್ಸಿನೇಷನ್ ಕೇಂದ್ರ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನ ಕೂಡ ತೋರಿಸುತ್ತದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...