Breaking News

BREAKING NEWS: ಇಂಟೆಲ್ ಇಂಡಿಯಾ ಮುಖ್ಯಸ್ಥೆ ಸ್ಥಾನಕ್ಕೆ ನಿವೃತಿ ರಾಯ್ ರಾಜೀನಾಮೆ

ವದೆಹಲಿ: ಇಂಟೆಲ್ ಇಂಡಿಯಾ ಮುಖ್ಯಸ್ಥೆ ನಿವೃತಿ ರಾಯ್ ( Intel India head Nivruti Rai ) 29 ವರ್ಷಗಳ ನಂತರ ಕಂಪನಿಗೆ ರಾಜೀನಾಮೆ ನೀಡಿದ್ದಾರೆ.

ರೈ ಅವರು ಫೆಬ್ರವರಿ 1994 ರಲ್ಲಿ ವಿನ್ಯಾಸ ಎಂಜಿನಿಯರ್ ಆಗಿ ಇಂಟೆಲ್ ನಲ್ಲಿ ಕೆಲಸ ಪ್ರಾರಂಭಿಸಿದ್ದರು.

ಆ ಬಳಿಕ ಇಂಟೆಲ್ ಫೌಂಡ್ರಿ ಸೇವೆಗಳ ಭಾರತದ ಮುಖ್ಯಸ್ಥ ಮತ್ತು ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇದೀಗ 29 ವರ್ಷ ಇಂಟೆಲ್ ಇಂಡಿಯಾದಲ್ಲಿ ಕರ್ತವ್ಯ ನಿರ್ವಹಿಸಿ, ಅಂತಿಮವಾಗಿ ಮುಖ್ಯಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡಿ, ನಿವೃತಿ ರಾಯ್ ಹೊರ ನಡೆದಿದ್ದಾರೆ.

‘ಇಂಟೆಲ್ ಇಂಡಿಯಾ ದೇಶದ ಮುಖ್ಯಸ್ಥ ಮತ್ತು ಇಂಟೆಲ್ ಫೌಂಡ್ರಿ ಸರ್ವೀಸಸ್ ( Intel Foundry services ) ಉಪಾಧ್ಯಕ್ಷ ನಿವೃತಿ ರಾಯ್ ಅವರು ಕಂಪನಿಯೊಂದಿಗೆ 29 ವರ್ಷಗಳ ನಂತರ ಇಂಟೆಲ್ ಅನ್ನು ತೊರೆಯುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಇಂಟೆಲ್ ಇಂಡಿಯಾ ಸಾಧಿಸಿದ ಅದ್ಭುತ ಪ್ರಗತಿಗಾಗಿ ನಾವು ನಿವೃತಿ ಅವರಿಗೆ ಕೃತಜ್ಞರಾಗಿರುತ್ತೇವೆ’ ಎಂದು ಇಂಟೆಲ್ ಹೇಳಿಕೆಯಲ್ಲಿ ತಿಳಿಸಿದೆ.

ಇಂಟೆಲ್ ನಲ್ಲಿ ಡಿಸೈನ್ ಎಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿದ ರಾಯ್ 1994ರಿಂದ 2005ರವರೆಗೆ ಅಮೆರಿಕದ ಕಂಪೆನಿಯಲ್ಲಿ ಕೆಲಸ ಮಾಡಿದ್ದರು. ಸೆಪ್ಟೆಂಬರ್ 2005ರಲ್ಲಿ, ಅವರು ಗ್ರೂಪ್ನಲ್ಲಿ ಚಿಪ್ಸೆಟ್ ಎಂಜಿನಿಯರಿಂಗ್ ಮತ್ತು ಬೌದ್ಧಿಕ ಆಸ್ತಿ ಅಭಿವೃದ್ಧಿಯ ಹಿರಿಯ ನಿರ್ದೇಶಕರಾಗಿ ಬೆಂಗಳೂರಿಗೆ ತೆರಳಿ ಕರ್ತವ್ಯ ನಿರ್ವಹಿಸಿದ್ದರು.

ಮಹಿಳಾ ಸಬಲೀಕರಣಕ್ಕೆ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ 2022 ರಲ್ಲಿ ರೈ ಅವರಿಗೆ ನಾರಿ ಶಕ್ತಿ ಪುರಸ್ಕಾರವನ್ನು ನೀಡಲಾಯಿತು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...