Breaking News

ಸಿರಿಯಾದ ಇಡ್ಲಿಬ್‌ನಲ್ಲಿ ರಷ್ಯಾ ವೈಮಾನಿಕ ದಾಳಿ- 9 ಮಂದಿ ಸಾವು, ಹಲವರಿಗೆ ಗಾಯ

ಮಾಸ್ಕಸ್ (ಸಿರಿಯಾ): ಸಿರಿಯಾದ ಬಂಡುಕೋರರ ನಿಯಂತ್ರಣದಲ್ಲಿರುವ ವಾಯುವ್ಯ ಇಡ್ಲಿಬ್ ಪ್ರಾಂತ್ಯದ ಮೇಲೆ ರಷ್ಯಾದ ಫೈಟರ್ ಜೆಟ್‌ಗಳು ಭಾನುವಾರ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 

ಇದ್ಲಿಬ್‌ನ ಜಿಸ್ರ್ ಅಲ್-ಶುಗರ್ ನಗರದಲ್ಲಿ ನಡೆದ ವೈಮಾನಿಕ ದಾಳಿಯು ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ಹಾನಿಗೊಳಿಸಿದೆ.

ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಮುಸ್ಲಿಂ ಹಬ್ಬವಾದ ಈದ್ ಅಲ್-ಅಧಾಗೆ ಮುಂಚಿತವಾಗಿ ಈ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ಫಿರಂಗಿ ಗುಂಡಿನ ದಾಳಿಯೂ ಇಲ್ಲಿ ನಡೆದಿದೆ ಎಂದು ನಾಗರಿಕ ರಕ್ಷಣಾ ವಿಭಾಗ ತಿಳಿಸಿದೆ.

ಭಾನುವಾರ ಜಿಸ್ರ್ ಅಲ್-ಶುಘೂರ್ ಮೇಲಿನ ದಾಳಿಯು 2023 ರಲ್ಲಿ ಇದುವರೆಗೆ ವಾಯುವ್ಯ ಸಿರಿಯಾದಲ್ಲಿ ಸಂಭವಿಸಿದ ಅತ್ಯಂತ ಮಾರಕವಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...