Breaking News

ಮಣಿಪುರದಲ್ಲಿನ ಕ್ರೈಸರ ಮೇಲಿನ ದಾಳಿ ಖಂಡಿಸಿ ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ

ಮಂಗಳೂರು: ಮಣಿಪುರದಲ್ಲಿನ ಕ್ರೈಸರ ಮೇಲಿನ ದಾಳಿಯನ್ನು ಖಂಡಿಸಿ ಕರ್ನಾಟಕ ಸಿರೋ ಮಲಬಾರ್ ಕಥೋಲಿಕ್ ಅಸೋಸಿಯೇಷನ್ (KSMCA)  ನೇತೃತ್ವದಲ್ಲಿ ಕ್ರೈಸ್ತ ಸಮುದಾಯದ ವತಿಯಿಂದ ಪ್ರತಿಭಟನೆ ನಡೆಯಿತು.

ಮಣಿಪುರ ರಾಜ್ಯದಲ್ಲಿ ಸುಮಾರು ಎರಡು ತಿಂಗಳುಗಳಿಂದ ಅಲ್ಲಿನ ಕ್ರೈಸ್ತ ಸಮುದಾಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮತ್ತು ದಾಳಿಯನ್ನು ಖಂಡಿಸಿದ ಪ್ರತಿಭಟನಾಕಾರರು ಮಂಗಳೂರು ನಗರದ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರವು ತಕ್ಷಣವೇ ಕ್ರೈಸ್ತರ ಮೇಲಿನ ದೌರ್ಜನ್ಯ ತಡೆದು ನೊಂದವರಿಗೆ ಪರಿಹಾರ, ಮನೆ, ಆರಾಧನಾಲಯಗಳನ್ನು ಮರು ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...